Tuesday 1 December 2015

ಕತೆ ಕಟ್ಟುವವರಿಗೆ ದಂತಕಥೆಯಾಗುವಳೇ `ಅವಳು'..!?



ಕತೆ ಕಟ್ಟುವವನಿಗೆ ಅವಳಾದರೇನು? ಅವನಾದರೇನು? `ಅವಳ' ಹಿಂದೆ ಬಿದ್ದರಷ್ಟೇ ತನ್ನ ಬೇಳೆ ಉತ್ಕøಷ್ಟವಾಗಿ ಬೇಯುವುದು ಎಂಬ ಮನಃಸ್ಥಿತಿಯುಳ್ಳ ಕತೆಗಾರನಿಗೆ ಆಹಾರವಾಗಿದ್ದು ನಿಜಕ್ಕೂ `ಅವಳ' ಸವಕಲು ಕತೆ. ಅವನೊಬ್ಬ ಹವ್ಯಾಸಿ ಕತೆಗಾರ. ಕತೆ ಕಟ್ಟುವುದರಲ್ಲಿ ನಿಸ್ಸೀಮ. ಅದು ನೋವಿನ ಸಂಗತಿಯಾಗಲೀ, ನಲಿವಿನ ವಿಷಯವಾಗಲೀ, ಓದುಗ ಹೆಚ್ಚಾಗಿ ಮರುಗುವುದು ಕೊಂಚ ಭಾವಾವೇಶದ ಸಂಗತಿಗಳಿಗೆ ಎಂಬ ಸತ್ಯ ಅರಿತು ಆತ ಹೇಳಲು ಮುಂದಾಗಿದ್ದು ಅವಳ ವ್ಯಥೆಯ ಕತೆಯನ್ನು. ಅವನಿಗೆ ಸದಾ ಕೊರಗಿನಲ್ಲಿರುವ, ಹೆಣ್ಮಕ್ಕಳ ಕತೆಯೇ ಬಲು ಇಷ್ಟ. ಮಾತ್ರವಲ್ಲ, ಅದನ್ನೇ ಓದುಗರಿಗೆ ವಿಶಿಷ್ಟ ರೆಸಿಪಿಯಲ್ಲಿ ಉಣಬಡಿಸುವುದೆಂದರೆ ಇನ್ನೂ ಇಷ್ಟ.
ಹೇಳಿಕೊಳ್ಳುವಷ್ಟು ತೀರಾ ಹಳೆಯ ಪರಿಚಯವೇನಲ್ಲ. ಅವಳು ಫೇಸ್‍ಬುಕ್‍ನಲ್ಲಿ ಅಪ್‍ಡೇಟï ಮಾಡುತ್ತಿದ್ದ ಎಲ್ಲ ಸ್ಟೇಟಸ್‍ಗಳಿಗೆ ಲೈಕು, ಕಮೆಂಟï ಮಾಡುವ ಮೂಲಕ ಪರಿಚಯವಾದನಾತ. ಕೇವಲ 40 ದಿನಗಳ ಒಡನಾಟದಲ್ಲಿದ್ದ ಅವರು ಅಪರಿಚಿತರಾದರೂ ಪರಿಚಯದಂತಿದ್ದರು. ಆತನಕವೂ ಇಬ್ಬರ ಪೆÇ್ರಫೈಲïಗಳು ಒಬ್ಬರಿಗೊಬ್ಬರಿಗೆ ಮೂರು ವರ್ಷಗಳಿಂದ ತೋರಿಕೆಯಲ್ಲಿದ್ದವಷ್ಟೆ.
ಆಕೆಯೂ ಬರಹಗಾರ್ತಿಯೇ. ಹಾಗಾಗಿಯೇ, ಬರವಣಿಗೆಯ ವಸ್ತು-ವಿಷಯಗಳು ಇಬ್ಬರ ವ್ಯಕ್ತಿತ್ವಕ್ಕೆ ಪ್ರಸ್ತುತಪಡಿಸುವ ರೀತಿಗಳಿಗೆ ಹೋಲಿಕೆಯ ಆಜುಬಾಜಿನಲ್ಲೇ ಇರುತ್ತಿದ್ದವು.  ಯೋಚನೆಯ ವ್ಯಾಪ್ತಿಯೇ ಅಂಥದ್ದಲ್ಲವಾ..!? ಸಿಕ್ಕಾಗ ಪ್ರೇಮದ ರಸಾನುಭಾವ, ಪರಿಪರಿಯಾಗಿ ಉಣಬಡಿಸುವ ಉಮೇದು, ಕೈತಪ್ಪಿದಾಗ ವಿರಹ ಯಾತನೆ, ಸಿಗದೆಯೇ ಹೋದಾಗ ನಿರಾಸೆ, ಭಾವಾವೇಶ, ಕೊನೆಗೆ ತನ್ನನ್ನೇ ತಾನು ಸಂತೈಸಿಕೊಳ್ಳುವ ಪರಿ, ಕಡೆಯದಾಗಿ ಎಡವಿ ಕಲಿತದ್ದಕ್ಕೆ ಅಲ್ಲಿನ ಹಿಂಬಾಲಿಗರಿಗೊಂದಿಷ್ಟು ಪಾಠ ಪ್ರವಚನಗಳು, ಬಿಟ್ಟಿ ಸಲಹೆಗಳು!
ಅಲ್ಲದೇ, ಕಳೆದ ಮೂರು ವರ್ಷಗಳಿಂದ ಆಕೆಯ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದನ್ನು ಆಕೆ ಆತನಕವೂ ಗಮನಿಸಿಯೇ ಇರಲಿಲ್ಲ. ಆಗಿದ್ದೂ ಒಂದೇ ಭೇಟಿ. ಅದು ಖಾಸಗಿ ಕಾರ್ಯಕ್ರಮದಲ್ಲಿ. ಅಷ್ಟಕ್ಕೆ ಆತ ಆಕೆಯ ಖಾಸಗಿ ಬದುಕಿನ ಕುರಿತು ಕೆದಕುವುದರಲ್ಲಿ ಮಗ್ನನಾಗಿಬಿಟ್ಟಿದ್ದ. ಅವಳೂ ಕೂಡ ಒಂದಷ್ಟು ಹೇಳಬೇಕು ಎನಿಸಿದ್ದರೂ ಯಾರನ್ನೂ ನಂಬದಂತೆ ತಲುಪಿದ್ದ ಅವಳ ಮನಸ್ಥಿತಿ ಕೊಂಚ ಹಿಂದೇಟು ಹಾಕಿಯೇ ಇತ್ತು. ಆದರೂ ಅವನು ಬಿಡಲಿಲ್ಲ. ದಿನದಿಂದ ದಿನಕ್ಕೆ ಕೊಂಚ ಹೆಚ್ಚಿಗೆಯೇ ಕೇರ್ ಮಾಡುವವನಂತೆ ಮಾತು ಮಾತಿಗೂ ಮೆಸೇಜï ಮಾಡುತ್ತಾ ನಾನೂ ಕೌನ್ಸೆಲಿಂಗï ಮಾಡುತ್ತಿದ್ದವನು. ನೀವೇನೋ ಪ್ರಾಬ್ಲಂನಲ್ಲಿ ಇದ್ಹಂಗೆ ಕಾಣುತ್ತೆ. ಅದಕ್ಕೊಂದು ಪರಿಹಾರ ಹುಡುಕೋಣ. ಈ ವಯಸ್ಸಲ್ಲಿ ಹೀಗೆ ಕೊರಗಿ ಕೂರುವ ಅವಶ್ಯವಾದರೂ ಏನು? ಎಂಬ ಸಾಂತ್ವನವಿಟ್ಟಿದ್ದನು. ವಿಧಿಯು ಅದೇ ಹೊತ್ತಿಗೆ ಕುಟುಂಬದಲ್ಲಿ ಕೊಂಚ ಅತಿ ಎನಿಸಿದ ಸನ್ನಿವೇಶಗಳನ್ನು ಸೃಷ್ಟಿಸಿತ್ತು. ಆಗವಳಿಗೆ ತತïP್ಷÀಣಕ್ಕೆ ನೆನಪಾಗಿದ್ದು ಅವನೇ! ಕೊಂಚ ಸಮಸ್ಯೆಯಲ್ಲಿz್ದÉೀನೆ ನಿಮಗ್ಯಾರಾದ್ರೂ ಲಾಯರ್ ಗೊತ್ತಿz್ದÁರಾ? ಕೇಳಿದಳು. ಆಗಲೇ ಅವಳ ಸಂಸಾರದ ಗುಟ್ಟು ವ್ಯಾದಿ ರಟ್ಟಾಗಿದ್ದು.. ಲಾಯರ್  ಸಂಪರ್ಕಿಸಲು ಮಧ್ಯವರ್ತಿಯಾಗಿ ಎಲ್ಲ ಅಪïಡೇಟïಗಳನ್ನು ಫೆÇೀನ್, ಮೆಸೇಜï ಮೂಲಕ ಕೇಳುತ್ತಲೇ ಇದ್ದ. ಹೀಗಾಗಿಯೇ ಅವಳ ಸಂಸಾರದ ಒಡಕಿನ ಸಂಗತಿಗಳು ಅವನ ಕಿವಿಗೆ ಬಿದ್ದಿತ್ತು ಅಷ್ಟೇ..! ಆದರೆ ಮಾಡಿದ ಆ ಸಣ್ಣ ಉಪಕಾರವೂ ಫೇಸïಬುಕïಲ್ಲಿ ಸ್ಟೇಟಸï ಹಾಕುವ ಮೂಲಕ ಊರಿಗೆ¯್ಲÁ ಟಾಂ ಟಾಂ ಮಾಡಿದಾಗಲೇ ಅವಳು ಒಂದಷ್ಟು ಎಚ್ಚರಿಕೆಗೊಂಡಳು. ಈತನಿಗೆ ಇದೊಂದು ಖಯಾಲಿ ಅನಿಸುತ್ತೆ. ಖಾಸಗಿ ವಿಷಯಗಳೆ¯್ಲÁ ಹೀಗೆ ಬೀದಿಯಲ್ಲಿ ಬಿದ್ದರೆ, ತನ್ನ ಗತಿಯೇನು? ಎಂಬ ಚಿಂತೆ ಕಾಡಿತ್ತು. ಅಷ್ಟೇ..! ಅಲ್ಲಿಗೆ ಅವನ ಸಂಪರ್ಕ ಕಡಿದುಕೊಂಡಿದ್ದಳು. ಯಾವ ಕಾಲï, ಮೆಸೇಜïಗೂ ಪ್ರತಿಕ್ರಿಯೆ ನೀಡುವುದನ್ನ ಸಂಪೂರ್ಣ ಬಂದï ಮಾಡಿದ್ದಳು.
ಆಗೆಲ್ಲಾ ಹೇಳಿಕೊಳ್ಳುವ ಉಮೇದುಗಾರಿಕೆ ಆಕೆಗೇನೂ ಇರಲಿಲ್ಲ. ತೀರಾ ಕೇರಿಂಗ್ ಅನಿಸಿದಾಗಲೇ  ಆಗೆಲ್ಲಾ ಚೀಪಾಗಿ ವರ್ತಿಸಲಿಕ್ಕಿಲ್ಲ ಎಂದು ಆಲೋಚಿಸಿದ್ದಳು. ಎಷ್ಟಾದರೂ ಅವಳೊಬ್ಬಳು ಯಕಶ್ಚಿತ್ ಮಾನವ ಹುಳು. ಹೇಳಿಕೊಂಡಿದ್ದ ಮಾತ್ರಕ್ಕೆ ಎಲ್ಲವನ್ನೂ ಬಟಾಬಯಲಿನಲ್ಲಿ ಹರಾಜಾಕಿಕೊಂಡು ಕೂರುವ ಮನಸ್ಥಿತಿ ಅವಳಿಗಿದ್ದಿದಿರಲಿಲ್ಲ. ಬದುಕು ಸಾಗಿಸುವುದೇನೂ ಆ ವಿದ್ಯಾವಂತೆಗೆ ಕಷ್ಟವಾಗಿರಲಿಲ್ಲ. ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳು. ಅವರು ದುಡಿದಿದ್ದೆಲ್ಲಾ ಯಾರಿಗೆ ಕೊಡಬೇಕಿತ್ತು. ಆಗಿದ್ದರೂ ಅವಳು ತನ್ನ ಸ್ವಂತ ಸಂಪಾದನೆಯಲ್ಲಿಯೇ ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲದವಳು. ಅದನ್ನು ಮಾಡುತ್ತಿದ್ದಳು  ಕೂಡ. ಆದರೆ ಹೀಗೆಲ್ಲಾ ಚೀಪ್ ಪಬ್ಲಿಸಿಟಿಗೆ ಒಳಗಾಗುವುದು ಅವಳಿಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ಕನಿಕರಕ್ಕೆ ಒಳಗಾದ ಬದುಕು ಯಾವತ್ತೂ ಮೇಲೆ ಬರಲು ಸಾಧ್ಯವಿಲ್ಲ. ಅದೊಂದು ಸಮಯಕ್ಕೆ ಎಲ್ಲರ ಕನಿಕರ, ಕಾಳಜಿ ಆಕೆ ಗಿಟ್ಟಿಸಿಕೊಳ್ಳಬಹುದು. ಆದರೆ ಆನಂತರ...!? ಹಾಗಾಗಿಯೇ ಯಾವುದನ್ನೂ ಬಿಟ್ಟುಗೊಡದೇ ಕೊಂಚ ಅತಿ ಅನಿಸುವ ರೀತಿಯಲ್ಲೇ ಮೊಂಡಾಗಿ ಬೆಂಡಾಗಿ ಬದುಕು ನಡೆಸುತ್ತಿದ್ದಳು.
 ಅಸಹನೆ ಅವನಿಗೆ ಅಲ್ಲಿಯೇ ಎಡೆಮುರಿ ಕಟ್ಟಿತ್ತು. ಅದೆಷ್ಟೋ ದಿನಗಳ ತರುವಾಯ ಅವಳಿಗೆ ಮತ್ತೆ ಮೆಸೇಜï ಬಂತು. ಆ ವೇಳೆಗಾಗಲೇ ಅವಳು ಎಲ್ಲ ಮರೆತೇಬಿಟ್ಟಿದ್ದಳು. ಸಹಜವಾಗಿಯೇ ಮತ್ತೆ ಸೌಜನ್ಯದ ಮಾತು, ಅದಕ್ಕೆ ಇವಳ ಸೌಜನ್ಯಪೂರಿತ ಪ್ರತಿಕ್ರಿಯೆ. ಕಾರಣ `ಅವಳು' ಬದಲಾಗಿದ್ದಳು. ಬದುಕು ಸುಧಾರಿಸಿತ್ತು. ನಂತರದ ಕೆಲವೇ ದಿನಗಳಲ್ಲಿ ಮತ್ತೆರಡು ಬಾರಿ ಫೆÇೀನ್‍ನಲ್ಲಿ ಅವನ ಮಿಸ್ಡ್‍ಕಾಲï ಇತ್ತು. ಇವಳು ಗಮನಿಸಿಯೂ ಮಾತನಾಡುವಂಥz್ದÉೀನಿದೆ  ಎಂದುಕೊಂಡು ಸುಮ್ಮನಾಗಿದ್ದಳು. ಆದರೆ, ಎದೆಯಲ್ಲಿ ಅವಳ ಮೇಲೆ ಅದ್ಯಾವಾಗ ಕತ್ತಿ ಮಸೆಯಲೂ ಮುಂದಾದನೋ ಏನೋ ಇವಳ ಗಮನಕ್ಕೇ ಬರಲೇ ಇಲ್ಲ. ಸಿಕ್ಕ ಸಿಕ್ಕವರ ಬಳಿ ಅವಳ ಬಗ್ಗೆ ಇಲ್ಲ ಸಲ್ಲದ್ದನ್ನ ಹೇಳಿದ್ದ. ಅದು ಇವಳ ಕಿವಿಗೂ ಬಿತ್ತು. ಹವ್ಯಾಸಿ ಬರಹಗಾರನಿಗೆ ಕೊಂಚ ಪಾಪ್ಯುಲಾರಿಟಿಯೂ ಇತ್ತು. ಹೇಳಿದ್ದನ್ನ ಕೇಳಿದವರು ಸುಳ್ಳು ಎಂದು ಪರಿಭಾವಿಸುವಂತಿರಲಿಲ್ಲ. ಅವಳ ಬದುಕ ಅಷ್ಟೂ ಸುಧಾರಣೆಗೆ ತಾನೇ ವಾರಸುದಾರ ಎಂಬ ಫೆÇೀಸ್ ಕೊಡಲು ಶುರು ಮಾಡಿದ. (ಪಾಪ! ಅವಳ ಆ ಪರಿಯ ಬದಲಾವಣೆಗೆ ಕಾರಣಕರ್ತನಾಗಿದ್ದ ಮನುಷ್ಯ ಮಾತ್ರ ದೂರದಿಂದಲೇ ಅವಳ ಏಳ್ಗೆ ನೋಡಿ, ಕಾಲ ಕಾಲಕ್ಕೂ ಅವಳ ಕ್ಷೇಮ ವಿಚಾರಿಸುತ್ತಾ, ಕೆಲವು ಸಂದರ್ಭಗಳಲ್ಲಿ ಸಾಂತ್ವನ ಹೇಳುತ್ತಾ, ಒಂದಿಷ್ಟು ಹುರಿದುಂಬಿಸುತ್ತಾ ತನ್ನ ಸಹಾಯ ಏನೂ ಅಲ್ಲ, ನಿಮಗೆ ಪ್ರತಿಭೆ ಇದೆ ಅದನ್ನ ಸದ್ವಿನಿಯೋಗಿಸಿಕೊಳ್ಳಿ ಯಾರ ಮಾತಿಗೂ ತಲೆಕೆಡಿಸಿಕೊಳ್ಳುವುದು ಬೇಡ ಎಂಬ ತೂಕದ ಮಾತನ್ನು ಆಡಿ ಮನುಷ್ಯತ್ವಕ್ಕೆ ತೂಕವಾಗಿ ನಿಂತಿದ್ದರು) ಆದರೂ ಆಕೆ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದಳು. ಕಾಲ ಅವಳನ್ನ ಆ ಪರಿ ಮೌನವಾಗಿರುವಂತೆ ಮಾಡಿಟ್ಟಿತ್ತು. ಆರ್ಥಿಕ ಮುಗ್ಗಟ್ಟು, ಮಗು-ಮನೆಯ ಜವಾಬ್ದಾರಿ, ಒಂದರೆಕ್ಷಣ ತೆಗೆದುಕೊಂಡ ಸಣ್ಣ ನಿರ್ಧಾರಕ್ಕೆ ಇಡೀ ಬದುಕನ್ನೇ ಓರೆಗೆ ಹಚ್ಚಿ, ಅದನ್ನು ಸಾಧಿಸಲೋಸುಗ ಇಲ್ಲಸಲ್ಲದನ್ನು ಮೈಮೇಲೆಳೆದುಕೊಂಡು ವ್ಯರ್ಥಗೊಳಿಸಿದ್ದ ಸಮಯ ನೆನೆದು, ಆಗಾಗ ಅವಳು ಮರುಕ ಪಡುತ್ತಲೇ ಇದ್ದಳು. ಇದೇ ಉz್ದÉೀಶಗಳು ಅವಳನ್ನು ಬೇರ್ಯಾವುದಕ್ಕೂ ಯೋಚನೆ ಮಾಡಲಿಕ್ಕೂ ಆಸ್ಪದ ನೀಡಲಿಲ್ಲ. ಮನುಷ್ಯ ಹೆಸರಿಂದ ಮಾತ್ರ ದೊಡ್ಡವನು. ಆದರೆ ಅವನಲ್ಲಿ ಸಾಮಾನ್ಯ ಮನುಷ್ಯನಿಗಿರುವಂತಹ ಗುಣವೂ ಇಲ್ಲ ಎಂದು ಪಾಠ ಕಲಿತು ತಟಸ್ಥ ನಿಲುವು ತಳೆದಿದ್ದಳು. ಇಂತಹ ಹಾವು-ಚೇಳಿನಂತಹ ಕಚ್ಚಾಟದ ವಿಷಯಗಳಲ್ಲೇ ಅತೀವ ಖುಷಿ ಪಟ್ಟುಕೊಂಡಿದ್ದ ಆತ ತನ್ನ ಪಾಪ್ಯುಲಾರಿಟಿಯನ್ನ ಈ ಮೂಲಕವೇ ಹೆಚ್ಚಿಸಿಕೊಂಡಿದ್ದ ಆತ ಅವಳ ಮೌನ ನಿಲುವು ಸುಮ್ಮನಿರಲುಗೊಡಲಿಲ್ಲ. ಎಷ್ಟಾದರೂ ಕತೆಗಾರನಲ್ಲವೇ..! ಹೇಳಿ ಕೇಳಿ ಕೊಂಚ ಭಾವವೇಶದಿಂದ ಒಂದಷ್ಟು ಫಾಲೋವರ್ಸïಗಳನ್ನು ಹೊಂದಿದ್ದ ವ್ಯಕ್ತಿತ್ವದವನು. ಬಿಟ್ಟಾನೆಯೇ... ಹೇಗಾದರೂ ಮಾಡಿ ಅವಳ ಮೌನ ಮುರಿಯಬೇಕೆಂಬ ಪಣ ತೊಟ್ಟುಬಿಟ್ಟನೇನೋ ಅವಳ ಬದುಕಿನ ಒಂದು ಸತ್ಯದ ಎಳೆಗೆ ಸಾವಿರ ಸುಳ್ಳಿನ ಎಳೆ  ಪೆÇೀಣಿಸಿ ಕತೆ ಕಟ್ಟಿಯೇ ಬಿಟ್ಟನು ನೋಡಿ, ಅದನ್ನು ಫೇಸïಬುಕïನಲ್ಲೂ ಹಾಕಿಬಿಟ್ಟ..! ಅದಕ್ಕೆ ಹೇಳಿಕೊಳ್ಳುವಂತಹ ಪ್ರತಿಕ್ರಿಯೆಗಳೇನೂ ಬರಲಿಲ್ಲ. ಅಲ್ಲದೇ, ಅವನ ಓದುಗ ವರ್ಗ ಕೂಡ ಸಣ್ಣಗೆ ಗದರಿತ್ತು.  ಅಂತಹ ಅಸಹಾಯಕ ಹೆಣ್ಣುಮಗಳ ಬಗ್ಗೆ ಹೀಗೆ¯್ಲÁ ಬರೆಯುವುದು ಯಾವ ಕೃತಾರ್ಥಕ್ಕಾಗಿ ಒಂದಷ್ಟು ಸ್ಫೂರ್ತಿ ತುಂಬುವ ಕತೆ ಬರೆಯಿರಿ.. ಹಾಗೇ ನೋಡಿದರೆ ಅವಳ ಬದುಕು ಅವಳಂತೆ ನೆಲೆತಪ್ಪಿದ ಹೆಣ್ಣುಮಕ್ಕಳಿಗೆ ಒಂದು ಮಾದರಿಯೇ ಸರಿ ಎಂದುಬಿಟ್ಟವು. ಅಲ್ಲಿಗೇ ಆತನೇನೋ ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ಬಾರದೇ ತನ್ನ ಮನದ ವಿಷವನ್ನ ಹೊರಹಾಕಿ ಮತ್ತೊಬ್ಬ ಅಸಹಾಯಕ ಹೆಣ್ಣುಮಗಳ ಕತೆ ಬರೆಯುವಲ್ಲಿ ಮಗ್ನನಾಗಿಬಿಟ್ಟ... ತನ್ನ ವಾರದ ಸಂಪಾದನೆಗೆ `ಅವಳ'ಂತಹ ಕಟ್ಟುಕತೆಗಳೂ ಬರೆಯುವ ತೆವಲು ಮುಂದುವರಿದೇ ಇತ್ತು..
ಇತ್ತ ಇವಳದೂ.....
ಅವಳ ಬಗ್ಗೆ ಗೊತ್ತಿದ್ದವರೊಬ್ಬರು ಫೆÇೀನ್ ಮಾಡಿ ಅವರ ಲೇಖನ ನೋಡಿದ್ರಾ ಎಂದಾಗ್ಲೇ ಅವಳು ಸಣ್ಣಗೆ ಬೆವರಿದ್ದಳು.  ಆದರೆ ಓದಿದ ತರುವಾಯ ಹಿಂದೊಂದು ದಿನ `ನಿನ್ನಂಥವಳಿಗೆ ಹೀಗಾಗಬಾರದಿತ್ತು' ಎಂದ ಮರುಗಿದ್ದ ಮನುಷ್ಯ ಇವನೇನಾ ಎಂದುಕೊಂಡಳು. ಆದರೆ ಅವನಿಗೆ ಹೇಳಿದ್ದ ಮಾತೇ ಮರೆತಿತ್ತು. ಕತೆಯಲ್ಲಿ ಹೇಳಿದ ಹಾಗೇ ಆರ್ಥಿಕ ಮುಗ್ಗಟ್ಟು, ಬದುಕುವ ಸ್ಥಿತಿ-ಗತಿಗಳ ಸಂಪೂರ್ಣ ವಿವರ ಇವನಿಗೆ ನೀಡಿ ಅವಳಿಗೇನೂ ಆಗಬೇಕಿರಲಿಲ್ಲ. ಅಷ್ಟಕ್ಕೂ ಅವಳು ಸಿರಿವಂತ ಮನೆಯ ಸೊಸೆ.. ಗಂಡನೊಂದಿಗೆ ಸಂಬಂಧ ಹಳಸಿದ್ದರೂ, ಕುಟುಂಬದಲ್ಲಿ ಸೈ ಎನಿಸಿಕೊಂಡಿದ್ದಾಕೆ. ಮಾತ್ರವಲ್ಲ, ಅಪ್ಪ-ಅಮ್ಮನ ಒಬ್ಬಳೇ ಮುದ್ದಿನ ಮಗಳು.. ಹೆಚ್ಚಾಗಿ ಜವಾಬ್ದಾರಿಯುತ `ತಾಯಿ'ಯಾಗಿದ್ದಳು. ಕ್ಷುಲ್ಲಕ ಬದುಕು ಮಾಡುವವಳಾಗಿದ್ದರೆ ಭೂತಕಾಲವನ್ನೆಲ್ಲ ಮರೆತು ಮುಂದೆ ಆಗುವುದರ ಬಗ್ಗೆ ಚಿಂತಿಸಿ `ಹಿಂದೆಗಿಂತಲೂ ಭವಿಷ್ಯದ ದಿನಗಳು ಅದ್ಭುತವಾಗಿರುತ್ತವೆ ಹಾಗೂ ಆ ಅದ್ಭುತವನ್ನು ನಾನೇ ಸೃಷ್ಟಿಸಿಕೊಳ್ಳುತ್ತೇನೆ' ಎನ್ನುವ ಕನಸನ್ನು ಎದೆಯಲ್ಲಿ ಬಿತ್ತಿಕೊಳ್ಳುವ ಅವಶ್ಯಕತೆ ಅವಳಿಗೆ ಬಹುಶಃ ಬೇಕಿದ್ದಿರಲಿಲ್ಲವೇನೋ. ಬದುಕು ಆ ಮಟ್ಟಿಗೆ ಅವಳಿಗೆ ಮನೆಪಾಠ ಮಾಡಿಟ್ಟಿತ್ತು. ಮೈಕೊಡವಿ ನಿಲ್ಲಲೂ ಅಣಿಗೊಳಿಸಿತ್ತು. ಅವಳ ಬದುಕಿನ ಪಾಠಗಳೇ ಅವಳಿಗೆ ನಾಳೆಯ ಬಗ್ಗೆ ಭರವಸೆ ಹುಟ್ಟಿಸಿತ್ತು. ಅದಕ್ಕಾಗಿಯೇ ಕಾಲದ ಉತ್ತರಕ್ಕೆ ಅವಳು ಕಾದು ನಿಂತುಬಿಟ್ಟಳು. ಇತ್ತ ಅವಳ ಬದುಕ ಸೂP್ಷÀ್ಮಗಳೆಲ್ಲ ಅವನಿಗೆ ಮುಂದೊಂದು ದಿನ ಮನವರಿಕೆಯಾಗುತ್ತದಾ! ಕತೆ ಕಟ್ಟುವವನಿಗೆ `ಅವಳು' ದಂತಕಥೆಯಾಗಿ ನಿಲ್ಲುತ್ತಾಳಾ...!? ಎಲ್ಲದಕ್ಕೂ ಕಾಲವೂ ಒಂದಿಷ್ಟು ಸಮಯ ಬೇಡಿ ಮಗುಮ್ಮಾಗಿ ನಿಂತಿತ್ತು.


-ಭಾಚಿ

1 comment: