ನಿರ್ಭಯಾ ನಿನಗೇಕೆ ಭಯ..?!
Rape should not be viewed as a deviant sexual act, but as an aggressive and antisocial tool for men’s control over women.
- Brown miller
ನೂರಕ್ಕೆ ನೂರರಷ್ಟು ಹೌದು ಎಂದು ಕಣ್ಣುಮುಚ್ಚಿ ಹೇಳಬಹುದಾದ ಸತ್ಯವಿದು ಅಲ್ಲವಾ..!?
ಅತ್ಯಾಚಾರ- ಒಬ್ಬ ವಿಕೃತ ಮನಸ್ಸಿನ ಪುರುಷ, ಹೆಣ್ಣಿನ ಮೇಲೆ ತನ್ನ ಅಧಿಪತ್ಯ ಸಾಧಿಸುವ ಕಟ್ಟ ಕೊನೆಯ ಹಂತ. ಯಾವುದಕ್ಕೂ ಆ ಹೆಣ್ಣು ಬಗ್ಗಳು ಎಂಬ ಬಳಿಕವಷ್ಟೇ ಆತ ಬಳಸುವ ಕಟ್ಟಕಡೆಯ ಅಸ್ತ್ರ.. ಅದುವೇ ಅತ್ಯಾಚಾರ! ಆಕೆಯ ದೇಹದ ಮೇಲೆ ಮಾಡಿದ ಹಿಂಸೆಯನ್ನು ತಾನು ಗೆದ್ದೇ ಎಂದು ಬೀಗುವ ಮನಸ್ಥಿತಿ. ಇಂತಹ ಹೀನ ಮನಸ್ಥಿತಿಗೆ ಏನೆನ್ನಬೇಕೋ ಗೊತ್ತಿಲ್ಲ. ಮಾತೆತ್ತಿದರೆ ‘ಅವಳ’ ಬಟ್ಟೆ, ದೇಹದ ಉಬ್ಬು-ತಗ್ಗುಗಳ ಬಗ್ಗೆ ಮಾತನಾಡುವ ಇಂತಹ ಗಂಡಸು ಎಂದು ಕರೆಸಿಕೊಳ್ಳುವ ಕಾಮುಕ ಮನಸ್ಸುಗಳು ಗಂಡು ಎಂಬ ಜನ್ಮಕ್ಕೆ ಅಪಮಾನ. ಅಪ್ಪ, ಅಣ್ಣ-ತಮ್ಮ, ಎಂಬ ಬಾಂಧವ್ಯಗಳ ನಡುವೆ ಬೆಳೆಯುವ ಆ ಹೆಣ್ಣೆಂಬ ಜೀವಕ್ಕೆ ಇಂತಹ ಹೀನ ಮನಸುಗಳ ನೋಟವಾದರೂ ಹೇಗೆ ತಿಳಿದೀತು? ಏನೋ ಟೀನೇಜ್ ದಾಟಿರುವ ಹುಡುಗಿಯರಿಗೆ ಆ ಬಗ್ಗೆ ಒಂದು ಸ್ಪಷ್ಟ ಜ್ಞಾನವಾದರೂ ತಿಳಿದಿರುತ್ತೆ. 2 ವರ್ಷ, 3ವರ್ಷದ ಆ ಎಳೆಯ ಕಂದಮ್ಮಗಳಿಗ್ಯಾವ ಅರಿವಿರುತ್ತೆ? ಆ ಮಟ್ಟಿಗೆ ಹೇಳೋದಾದ್ರೆ, ಆ ಹೆಣ್ಣು ಮಗುವಿನ ಹುಟ್ಟಿಗೆ ಕಾರಣವಾಗುವ ಹೆಣ್ಣಿನಷ್ಟೇ ಸಮಾನ ಕಾರಣವಾದ ಗಂಡಿನ ಬಳಿ ಆ ಮಗುವ ಪಾಲನೆ-ಪೋಷಣೆಯಾದ್ರೂ ಹೇಗೆ? ವಿಶ್ವದಲ್ಲೇ ಸುದ್ದಿಯಾದ ಭಾರತದ ನಿರ್ಭಯಾಳ ಅತ್ಯಾಚಾರ ಪ್ರಕರಣ ಘನ-ಘೋರ ಕೃತ್ಯಕ್ಕೆ ಸಾಕ್ಷಿ. ಮಾಡಿದ್ದ ತಪ್ಪಿನ ಸಮರ್ಥನೆಗೆ ಇಡೀ ಗಂಡು ಸಮುದಾಯವೇ ಅವನ ಬೆನ್ನ ಹಿಂದೆ ನಿಂತಂತೆ ವಕೀಲ ಎಂ.ಎಲ್ ಶರ್ಮಾ ಸೇರಿದಂತೆ ಇತರರು ನೀಡುತ್ತಿರುವ ಹೇಳಿಕೆಗಳ ಸುರಿಮಳೆ ಅವರಲ್ಲಿನ ಹೀನ ಮನಸ್ಥಿತಿಗಳಿಗೆ ಹಿಡಿದ ಕೈಗನ್ನಡಿ. ಅಲ್ಲದೇ, ಮುಂದಿನ ಪೀಳಿಗೆಗೆ ಹೆಣ್ಣನ್ನು ಬಗ್ಗು ಬಡಿಯುವುದು ಅತ್ಯಾಚಾರದ ಮೂಲಕ ಎಂಬ ಸಂದೇಶ ನೀಡುತ್ತಿದ್ದಾರೆ. ಮಾತ್ರವಲ್ಲ, ಹೆಣ್ಣಿಗೆ ಇಂತಿಷ್ಟೇ ಪರಿಧಿ ಎನ್ನುವ ಬಲವಂತದ ಬಂಧನ ಹೇರುವಿಕೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇಲ್ಲಿಯಷ್ಟು ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡುವ ನಿದರ್ಶನ ಜಗತ್ತಿನ ಎಲ್ಲಿಯೂ ಇಲ್ಲ. ಅಂತೆಯೇ ಹೆಣ್ಣನ್ನ ಇಷ್ಟು ತುಚ್ಛವಾಗಿ ನಡೆಸಿಕೊಳ್ಳುವ ನಿದರ್ಶನವೂ ಬೇರೆಲ್ಲಿಯೂ ಇಲ್ಲವೆನಿಸುತ್ತೆ.
ಹುಡುಗಿ ಬಹಿರ್ದೆಶೆಗೆಂದು ಮನೆಯಿಂದ ಹೊರಬಂದ ಸಮಯದಲ್ಲಿ ಸಾಮೂಹಿಕ ಅತ್ಯಾಚಾರ.. ಪೊಲೀಸ್ ಠಾಣೆಯಲ್ಲೇ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ.. ಸುಮಾರು ಹತ್ತು ಜನರು ಸೇರಿ ಆದಿವಾಸಿ ಮಹಿಳೆ ಮೇಲೆ ಅತ್ಯಾಚಾರ.. ಅಲ್ಲದೇ, ವಿವಸ್ತ್ರಗೊಳಿಸಿ ಪರೇಡ್ ಮಾಡಿಸಿ ಆಕೆಯ ಮಗನ ಎದುರೇ ಮೂತ್ರ ಕುಡಿಯುವಂತೆ ಒತ್ತಡ..
ನಮ್ಮ ದೇಶದಲ್ಲಿ ದಿನವೊಂದಕ್ಕೆ ಕನಿಷ್ಠ 92 ಅತ್ಯಾಚಾರಗಳು ನಡೆಯುತ್ತಿವೆಯಂತೆ ಇದು ಯಾರೋ ಹೇಳಿರುವ ಮಾಹಿತಿಯಲ್ಲ, ರಾಷ್ಟ್ರೀಯ ಅಪರಾಧ ದಾಖಲಾತಿ ಮಂಡಳಿ(ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ ಅಂಶ. 2012ರಲ್ಲಿ ದೇಶದಲ್ಲಿ 24,923 ಅತ್ಯಾಚಾರ ಪ್ರಕರಣ ದಾಖಲಾಗಿದ್ದರೆ, 2014ರಲ್ಲಿ ಇದು 33,707ಕ್ಕೆ ಹೆಚ್ಚಿದೆ. 15,556 ಪ್ರಕರಣಗಳಲ್ಲಿ ರೇಪ್ ಸಂತ್ರಸ್ತೆಯರು 18ರಿಂದ 30 ವರ್ಷದವರಾಗಿದ್ದಾರೆ ಎಂದು ವರದಿ ಹೇಳಿದೆ.
ಡಿಸೆಂಬರ್ ೧೬, ೨೦೧೨ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲಿನ ಗ್ಯಾಂಗ್ ರೇಪ್ ತರುವಾಯ, ಒಂದಾದರೊಂದರಂತೆ ರೇಪ್ ಕೇಸ್‌ಗಳು ದಾಖಲಾಗುತ್ತಲೇ ಇದೆ. ಇಲ್ಲಿ ಆಶ್ಚರ್ಯ ಪಡಬೇಕಾದ್ದು ಕೇಸ್‌ಗಳ ದಾಖಲಾತಿಗಲ್ಲ. ಒಂದಕ್ಕೊಂದು ಪ್ರಕರಣಗಳು ಕ್ರೂರತೆಯನ್ನ ತೋರುತ್ತಿರೋದು. ಅತ್ಯಾಚಾರಗೈಯ್ಯುವ ಕಾಮುಕರು ಜಿದ್ದಿಗೆ ಬಿದ್ದಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಅಥವಾ ಹೆಣ್ಣೊಬ್ಬಳನ್ನು ನೋಡಿದಾಗ ಕಚ್ಚೆ ಕಳಚಿಡುವ ಕಾಮುಕರ ಕುತೂಹಲ ಪರಮಾವಧಿ ತಲುಪಿರಬೇಕು ಎಂಬ ಗುಮಾನಿ ಹುಟ್ಟುತ್ತಿದೆ. ಇಂತಹ ನೀಚ ಮನಸ್ಥಿತಿಗಳಿಗೆ ಏನೆನ್ನುವುದೋ? ನನಗಂತೂ ಈ ಬಗ್ಗೆ ಸಿಕ್ಕ ಸಿಕ್ಕಲ್ಲೆಲ್ಲಾ ಕೇಳಿ ತಿಳಿಯುತ್ತಾ, ಇಂತಹ ಹೀನ ಮನಸ್ಥಿತಿಗಳಿಗೆ ಮರುಕ ಹುಟ್ಟುತ್ತಿದೆ. ಇಂತಹವರಿಗೆ ಚಿಕಿತ್ಸೆ, ಹೆಣ್ಣು ನಿಮ್ಮಂತೆಯೇ ಸಾಮಾನ್ಯ ದೇಹಸ್ಥಿತಿಯುಳ್ಳವಳು ಎಂಬ ಜ್ಞಾನವನ್ನು ಕೂರಿಸಿಕೊಂಡು ತಲೆಗೆ ತುಂಬಬೇಕೆನಿಸುತ್ತೆ. ಸದ್ಯ ಇದೇ ಮನಸ್ಥಿತಿಗಳ ಅಧ್ಯಯನ ಪುಸ್ತಕ ಬರೆಯಲು ಪ್ರೇರಣೆ ನೀಡಿರುವುದು ಇನ್ನಷ್ಟು ಅಧ್ಯಯನಕ್ಕೆ ನಾಂದಿ ಹಾಡಿದೆ. ಎಲ್ಲದಕ್ಕೂ ಅಂತ್ಯ ಎನ್ನುವುದಿದೆ. ಇಂತಹ ಕೃತ್ಯಗಳ ಫುಲ್ ಸ್ಟಾಪ್‌ಗೆ ನಮ್ಮಂತಹ ಮನಸ್ಥಿತಿಗಳು ಮುನ್ನುಡಿ ಬರೆಯಬೇಕಷ್ಟೇ. ಮತ್ತದೇ ವಿಕೃತ ಗ್ಯಾಂಗ್ ರೇಪ್‌ಗೆ ಹೆಣ್ಣೊಬ್ಬಳು ಬಲಿಯಾಗುವ ಮುನ್ನ ಎಲ್ಲರೂ ಹೆಣ್ಣು-ಗಂಡಿನ ಪರಿಧಿ ಮೀರಬೇಕಿದೆ. ನಿರ್ಭಯಳಿಗೆ ಅಭಯ ನೀಡಬೇಕಿದೆ.
ಕೊನೆಯದಾಗಿ ಹೆಣ್ಣು-ಗಂಡು ಇಬ್ಬರೂ ಸಮಾಜದ ಕಣ್ಣುಗಳು.. ಅವರಿಬ್ಬರೂ ಸಮನಾಗಿದ್ದರೆ ಮಾತ್ರ ಸಮಾಜ-ಸಮೂಹ....! ಇದನ್ನು ಅರಿತುಕೊಂಡವರಷ್ಟೇ ನಾಗರಿಕರು.. ಹೌದಲ್ಲವಾ..?!