Wednesday 1 July 2015

Conversation opened. 1 unread messa




Displaying photo.JPG.

ಕಾಪಿಟ್ಟ ನಿರೀಕ್ಷೆಯಲ್ಲಿ......

ಕವಿತೆಯ ಹಾಗೇ ದಿನ ದಿನವೂ
ನಿತ್ಯ ನೂತನವಾಗಿ ನಿನ್ನ
ಸನಿಹದಲ್ಲೇ ಮೊಗ್ಗಾಗಿ ಹೂವಾಗಿ
ಅರಳಬೇಕೆಂದುಕೊಂಡಿದ್ದೆ
ನಿನ್ನ ತೋಳಲ್ಲಿ ಬಾಹ್ಯ ಪರಪಂಚದ
ಹಮ್ಮು ಗಿಮ್ಮಿಲ್ಲದೆ ಕಳೆದುಹೋಗೊಣವೆಂದಿದ್ದೆ
ನಾಚಿ ನೀರಾಗಿ ನಿನ್ನೊಡಲ ಸೇರಬೇಕೆಂದಿದ್ದೆ

ನಿನ್ನ ಅರೆಕ್ಷಣವಾದರರೂ
ಸೇರುವ ಕುಂಟುನೆಪಕ್ಕಾಗಿ
ಜಗತ್ತಿಗೆ ನನ್ನೆಲ್ಲಾ ಮೇಟಿವಿದ್ಯೆ
ಬಳಸಿ ಜೋಗುಳ ಹಾಡಿ
ಮಲಗಿಸಿದ್ದೆ , ಪರಪಂಚವು
ನನ್ನ ಮೇಲಿನ ಪ್ರೀತಿಯಿಂದಲೇ
ನಿದ್ರೆ ಬಾರದಿದ್ದರೂ ನಿದ್ರಿಸಿದಂತೆ
ನಟಿಸಿತ್ತು.., ನಾ ನಿನ್ನ ಸೇರಲೆಂಬ
ಒತ್ತಾಸೆಯಲ್ಲದಿದ್ದರೂ ನನ್ನ
'ಖುಷಿ' ನೋಡುವ ಹಂಬಲದಲ್ಲಿ

ಆಸ್ಥೆಯಿಂದಲೇ ಕಾಯುತ್ತಿದ್ದ
ಮನದ ಮಿಡಿತ-ತುಡಿತಗಳನ್ನ
ನಿನಗಾಗಿಯೇ ಬೇರೆಡೆ
ಕದಲದಂತೆ ಕಾಪಿಟ್ಟಿದ್ದೆ
ಬಂಧನಕ್ಕೀಡು ಮಾಡಿದ್ದೆ
ಸೆರೆವಾಸದ ಸಜಾ ಎಷ್ಟೆಂಬುದರ
ಎಣಿಕೆ ತಿಳಿಸದೆಯೇ..,

ಬದುಕೇ ತಿರಸ್ಕರಿಸಿದ್ದ
ನತದೃಷ್ಟ ಹೆಣ್ಣನ್ನು
ನೀ ಅಪ್ಪಿ ಆರಾಧಿಸುತ್ತಿಯೆಂದು
ಈ ಕ್ಷಣದವರೆಗೂ ನಂಬಿದ್ದೆ
ಕಷ್ಟವಾದರೂ ಬದುಕ ಬದುಕುವಂತೆ
ಮುದ್ದಿಸಿ, ಒಂದಷ್ಟು ಉಸಿರ ನೀಡಿ
ಜೀವಿಸಲು ಕಿವಿಮಾತು ಹೇಳಿದ್ದೆ

ಹೀಗೆ ಬದುಕಿನ ಇರುವಿಕೆಯನ್ನೇ
ಮರೆಸಿ ನಡುರಾತ್ರಿ ಕಂಡ ಕನಸು
ಬೆಳಗಾದಾಗ ನಿನ್ನ ತಡಕಾಡಿದ್ದೆ
ಬಂತು ಮಗ್ಗುಲಲ್ಲಿ ಆ ಕಲ್ಪನೆಯ
ನೀನಿಲ್ಲವೆಂಬ ಅರಿವಾಗುತ್ತಲೇ
ಬದುಕನ್ನೇ ಶಾಶ್ವತ ಮರೆತುಬಿಡೋಣ
ಎನ್ನುವ ಧಾವಂತ.., ಮತ್ತೆ
ನಿನ್ನ ಸೇರುವ ಹಂಬಲದ
ಆ ಮತ್ತೊಂದು ರಾತ್ರಿಯ
ಹಪಹಪಿಕೆಯಲ್ಲೇದಿನದೂಡುವ
ಕಾಯಕ.. ಮತ್ತೆ ಮುಂದುವರೆಸುತ್ತಾ...

-ಭಾಚಿ