ಇನ್ನೇನು ಪ್ರೇಮಿಗಳ ದಿನ ಬಂದೇ ಬಿಡ್ತು. ಕಳೆದ ವರ್ಷ ಇದೇ ಸಮಯಕ್ಕೆ ಪ್ರೇಮಿಯಾಗಿದ್ದವನು, ಇಂದು ಗಂಡನಾಗಿಬಿಟ್ಟಿದ್ದಾನೆ. ಪ್ರೇಮಿಯಿಂದ ಗಂಡನಾಗಿ ಬಡ್ತಿ ಪಡೆದ ಹೆಚ್ಚುಗಾರಿಕೆ ಅವನದಾದರೆ, ಇನ್ನು ಜೀವಮಾನವಿಡೀ ಸಂಸಾರದ ಜವಾಬ್ದಾರಿ ಹೊರುವ ಕಾಯಕ ಅವಳ ಹೆಗಲಿಗೆ. ಮದುವೆ ಕಾರ್ಯಗಳೆಲ್ಲವೂ ಈಗಷ್ಟೇ ಮುಗಿದಿವೆ. ಸ್ವರ್ಗಕ್ಕೆ ಮೂರೇ ಗೇಣು ಆ ಪ್ರಣಯ ಪಕ್ಷಿಗಳಿಗೆ. ಆದರೆ ಆಗಲೇ ಬೇರೊಂದು ದೇಶಕ್ಕೆ ಹೋಗಲು ಕಚೇರಿಯಿಂದ ಆದೇಶವಾಗಿ ಬಿಟ್ಟಿದೆ ಅವನಿಗೆ. ಬಿಟ್ಟು ಹೊರಡಲೇಬೇಕು, ಕೆಲವೇ ತಿಂಗಳುಗಳ ತರಬೇತಿಗಾಗಿ. ಅವನಿಗೋ ಆ ಮುದ್ದು ಮೊಗದ ಸಂಗಾತಿಯನ್ನು ಬಿಟ್ಟು ಹೊರಡಲು ಮನಸ್ಸಿಲ್ಲ.
ಈಕೆಗೆ ಅವನಿಲ್ಲದ ದಿನಗಳನ್ನು ಕಳೆಯೋದಾದರೂ ಹೇಗೆ ಅನ್ನೋ ಯಾತನೆ. ಆದರೆ, ಇದು ಜೀವನಪರ್ಯಂತ ಅಲ್ಲದೇ ಹೋದರೂ ಆಗಷ್ಟೇ ಮದುವೆಯಾದ ದಂಪತಿ ನಡುವೆ ನಿರ್ಮಾಣವಾಗುವ ಈ ವೇದನೆ ನಿಜಕ್ಕೂ ಹೇಳಿಕೊಳ್ಳಲಾರದಂಥದ್ದು.
ಪ್ರೀತಿಸಿ ಮದುವೆಯಾಗಿದ್ದರಂತೂ ಮುಗಿದೇಹೋಯ್ತು. ಅವನೊಟ್ಟಿಗಿನ ಮಧುರ ಬಾಂಧವ್ಯ ಎತ್ತಲೂ ಮನ ಹೊರಳದಂತೆ ಮಾಡಿಬಿಡುತ್ತದೆ. ಆದರೆ, ಹೋಗಲೇಬೇಕಾದ ಅನಿವಾರ್ಯ ಅವನಿಗೆ. ಒಲ್ಲದ ಮನಸ್ಸಿನಿಂದಲೇ ಹೊರಡಿಸುವ ಕಾರ್ಯ ಇವಳಿಗೆ. ವೈಯಕ್ತಿಕ ಹಾಗೂ ವೃತ್ತಿಬದುಕನ್ನು ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆ ಅವಳ ಹೆಗಲೇರುತ್ತದೆ. ಅಷ್ಟೇ ಧಾವಂತದಲ್ಲಿ ಹೊರಡಿಸುವ ಮನಸ್ಸು ಮಾಡಿಯೇ ಬಿಡುತ್ತಾಳಾಕೆ. ಆದರೆ, ಇದೇ ವಿಷಯವಾಗಿ ಕೆಲಸಕ್ಕೆ ಬೈ ಬೈ ಹೇಳುವ ಮನಸ್ಸು ಅವನದ್ದು. ಆಕೆಗಿಂತ ಬೇರ್ಯಾವುದೂ ಹೆಚ್ಚಲ್ಲ ಅವನಿಗೆ ಆ ಸಮಯಕ್ಕೆ..! ಆದರೆ, ತಾನೀಗ ಒಂಟಿಯಲ್ಲ. ಅವಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳಬೇಕು. ಹಾಗಂತ ಅವಳಿಗೆ ಪ್ರಾಮಿಸ್ ಮಾಡಿದ್ದೀನಿ. ಅದನ್ನ ಚಾಚೂತಪ್ಪದೆ ಪಾಲಿಸ್ತೀನಿ ಕೂಡ ಅಂಥ ತನ್ನೊಳಗೆ ಶಪಥ ಮಾಡಿಕೊಂಡು, ಹೊರಡಲು ರೆಡಿಯಾಗಿ ಬಿಡುತ್ತಾನವನು. ದಾಂಪತ್ಯದ ಹೊಸ್ತಿಲನ್ನು ಆಗತಾನೇ ತುಳಿದಿರುವ ದಂಪತಿಗೆ ಹೀಗೆ ದೂರವಾಗುವ ಸಂದರ್ಭ ಒದಗಿದರೆ ಅವರ ಪರಿಸ್ಥಿತಿ ಏನಾಗಬೇಡ? ಅವನೇನೋ ಹೊಸ ದೇಶ, ಹೊಸ ಪರಿಸರ, ಹೊಸ ಕೆಲಸಗಳಲ್ಲಿ ಮುಳುಗಿ ಹೋಗಬಹುದು. ಆದರೆ ಅವನಿಲ್ಲದ ದಿನಗಳನ್ನು ಅವಳು ಕಳೆಯುವುದಾದರೂ ಹೇಗೆ?
ಹೀಗೆ ಮಾಡಿ
* ಅವನ ಫೆÇೀಟೋ, ಅವನನ್ನು ನೆನಪಿಸುವ ವಸ್ತುಗಳನ್ನು ಜೋಪಾನವಾಗಿಡಿ. ಅದನ್ನು ಸಾಧ್ಯವಾದಷ್ಟೂ ನಿಮ್ಮ ಹತ್ತಿರದಲ್ಲಿಯೇ ಇಟ್ಟುಕೊಳ್ಳಿ. ಅವುಗಳಲ್ಲೇ ಅವನ ಬಿಂಬ ಕಾಣಿ.
* ಅವನ ಬಾಲ್ಯದ ಫೆÇೀಟೋಗಳನ್ನು ಒಂದೆಡೆ ಶೇಖರಿಸಿ ಫೈಲ್ ಮಾಡಿಡಿ, (ಅದರಲ್ಲೂ ಬಾಲ್ಯದ ಭಾವಚಿತ್ರಗಳಾಗಿದ್ದರೆ ಉತ್ತಮ). ಅದರಲ್ಲಿ ನಿಮ್ಮ ಮಗುವಿನ ಪ್ರತಿರೂಪ ಕಾಣಿ. ಮೈನವಿರೇಳಿಸುವ ಪುಳಕವದು!
* ಮತ್ತೆ ಮತ್ತೆ ಅವನನ್ನು ನೆನಪಿಸುವ, ಅವನಿಗೆ ಆಪ್ತವಾದ ಘಟನೆಗಳನ್ನು ನೆನೆಯುತ್ತಿರಿ. ಜಸ್ಟ್ ಚಿಲ್ ಮಾಡುತ್ತ ಆ ಕ್ಷಣವನ್ನು ಎಂಜಾಯ್ ಮಾಡಿ.
* ಅವನ ಗಿಫ್ಟ್‍ಗಳನ್ನು ಜೋಪಾನ ಮಾಡಿ. ಅವನು ವಾಪಸ್ ಬರುವ ಹೊತ್ತಿಗೆ ಅವನ ಅಭಿರುಚಿಗೆ ತಕ್ಕಂತೆ ನಿಮ್ಮ ಮನೋಭಾವ, ಡ್ರೆಸ್ಸಿಂಗ್ ಸೆನ್ಸ್, ನಡವಳಿಕೆಗಳನ್ನು ಬದಲಾಯಿಸಿಕೊಳ್ಳಿ. ಆತ ಮತ್ತೆ ನಿಮ್ಮನ್ನು ನೋಡುವಷ್ಟರಲ್ಲಿ ಸರ್‍ಪ್ರೈಸ್ ನೀಡಿ. ಅವನ ಮೊಗದ ಆ ಸಂತೋಷವನ್ನು ಮಿಸ್ ಮಾಡಿಕೊಳ್ಳಬೇಡಿ.
* ಅಡುಗೆಯಿಂದ ಸಂಗಾತಿಯನ್ನು ಖುಷಿಪಡಿಸುವುದು ಸಾಮಾನ್ಯ ವಿಷಯವಲ್ಲ. ಆದರೆ, ನಿಜಕ್ಕೂ ಬಾಯಿರುಚಿಯಿಂದ ಅವನನ್ನು ಮತ್ತಷ್ಟು ಒಲಿಸಿಕೊಳ್ಳಬಹುದು. ಅದು ಶಾಶ್ವತವಾಗಿಯೂ ಉಳಿಯುವಂತಹುದು. ಹಾಗಾಗಿಯೇ ಒಳ್ಳೊಳ್ಳೆಯ ಅಡುಗೆ ತಿಂಡಿ-ತಿನಿಸುಗಳನ್ನು ಮಾಡುವುದನ್ನು ಕಲಿಯಿರಿ. ಅವನಿಲ್ಲದ ಘಳಿಗೆಯನ್ನು ಅವನಿಗಾಗಿಯೇ ಮೀಸಲಿಡಿ.
* ನಿತ್ಯ ಅವನ ಯಾವ್ಯಾವ ಚೇಷ್ಟೆ, ವರ್ತನೆ ಅತಿಯಾಗಿ ನೆನಪಾಯಿತು ಎಂಬುದನ್ನು ನೋಟ್ ಮಾಡಿಡಿ. ಸಾಕಷ್ಟು ಖುಷಿ ಕೊಟ್ಟ ನೆನಪುಗಳನ್ನು ಡೈರಿಯಲ್ಲಿ ಬರೆದಿಡಿ.
* ಅವನೊಟ್ಟಿಗೆ ಓಡಾಡಿದ ಸ್ಥಳಗಳಿಗೆ ಆಗಿಂದಾಗ್ಗೆ ಭೇಟಿ ನೀಡುತ್ತಲಿರಿ. ಅವನ ಸಂಬಂಧಿಕರು, ಗೆಳೆಯರು ಅವನ ಬಗೆಗೆ ಆಡುವ ಒಳ್ಳೆಯ ಮಾತುಗಳನ್ನು ಆಲಿಸಿ. ಒಳಗೊಳಗೆ ಹೆಮ್ಮೆ ಪಡಿ. ಸಂಗಾತಿಯೆಂದರೆ ಸುಮ್ಮನೆ ಅಲ್ಲ, ಅವನ ಖ್ಯಾತಿ ಎಲ್ಲೆಲ್ಲೂ ಹಬ್ಬಿದೆ ಎಂಬ ಭಾವ ನಿಮ್ಮನ್ನು ಆವರಿಸಲಿ.
* ಅವನಿಗಾಗಿ ಒಂದಷ್ಟು ಕಿರು ಕವನಗಳನ್ನು ಬರೆಯಲು ಪ್ರಯತ್ನಿಸಿ. ಸಾಧ್ಯವಾದರೆ, ಪ್ರೇಮಪೂರಿತವಾಗಿ ಒಂದು ಸುದೀರ್ಘ ಲವ್ ಲೆಟರ್ ಬರೆಯಿರಿ. ಭಾವಗಳು ಪೂರ್ಣವಾಗಿ ವ್ಯಕ್ತವಾಗುವಷ್ಟು ಅಲ್ಲದೆ ಹೋದರೂ ಪರವಾಗಿಲ್ಲ. ಅನಿಸಿದ್ದನ್ನೆಲ್ಲ, ಅವನಿಗೆ ಹೇಳಲು ಮಿಸ್ ಮಾಡಿಕೊಂಡದ್ದನೆಲ್ಲ ಒಂದೆಡೆ ಬರೆದಿಡಿ. ಅವುಗಳಿಗೆ ಕಾವ್ಯದ ರೂಪ ತರಲು ಸಾಧ್ಯವಾ? ಟ್ರೈ ಮಾಡಿ.
* ಇಬ್ಬರಿಗೂ ಇಷ್ಟವಾಗುವ ಮತ್ತು ಇಷ್ಟವಾಗದಿರುವ ಬಣ್ಣ, ಹವ್ಯಾಸ, ದೇಹದ ಹಾವಭಾವ, ತಿಂಡಿ, ದಿರಿಸು, ಯಾವಾಗಲೂ ಕಾಮನ್ ಆಗಿ ಥ್ರಿಲ್‍ಗೊಳಿಸುವ ವಿಷಯಗಳ ಬಗ್ಗೆ ಒಂದು ಪಟ್ಟಿ ಮಾಡಿಡಿ. ಇಬ್ಬರಿಗೂ ಅದೆಷ್ಟು ಸಮನಾದ ಅಭಿರುಚಿಯಿದೆ ಎಂಬುದು ಅರಿವಿಗೆ ಬರುತ್ತದೆ.
* ಅವನನ್ನು ಮಿಸ್ ಮಾಡಿಕೊಂಡ ಕ್ಷಣಗಳ ಬಗ್ಗೆಯೂ ಬರೆಯುವ ಅಭ್ಯಾಸವಿಟ್ಟುಕೊಳ್ಳಿ. ಇನ್ಯಾವತ್ತೋ ಅವನೊಟ್ಟಿಗೆ ಕುಳಿತು ಆ ಕ್ಷಣಗಳನ್ನು ವಿವರಿಸುವ ಸನ್ನಿವೇಶ ಒದಗಬಹುದು. ಯಾವತ್ತಿಗೂ ಅದು ಮುದವಾದ ಅನುಭೂತಿ ಕೊಡುವುದು ಸುಳ್ಳಲ್ಲ.
* ಅವನು ಮೊದಲ ಬಾರಿ ನಿಮ್ಮನ್ನು ಭೇಟಿಯಾದ ಶರ್ಟ್ ಇದ್ದರೆ, ನೀವೇ ಅದನ್ನು ತೊಟ್ಟು ಒಮ್ಮೆ ಕನ್ನಡಿಯಲ್ಲಿ ನಿಮ್ಮ ಪ್ರತಿಬಿಂಬ ನೋಡಿಕೊಳ್ಳಿ. ಸುಮ್ಮನೆ ಅವನನ್ನು ಮನದಲ್ಲಿ ನೆನೆಯಿರಿ. ಆ ಖುಷಿ ಇದೆಯಲ್ಲ, ಜಸ್ಟ್ ಫೀಲ್ ದಟ್!
ಇಷ್ಟು ಮಾಡಿ ನೋಡಿ. ಹೊಸ ಸಂವತ್ಸರ, ಹೊಸ ಮನ್ವಂತರ ಶುರುವಾಗುತ್ತದೆ ಇನಿಯನ ಆಗಮನದ ಹೊತ್ತಿಗಾಗಲೇ.. ಇನಿಯನೊಂದಿಗೆ ಕಳೆವ ಹೊತ್ತು ಇz್ದÉೀ ಇದೆ.. ಅವನಿಲ್ಲದ ಆ ಹೊತ್ತನ್ನು ಜಸ್ಟ್ ಫೀಲ್ ಮಾಡುತ್ತಿರಿ. ಮೇಲೆ ಹೇಳಿರುವ ಎಲ್ಲ ಕಿವಿಮಾತುಗಳನ್ನು ಒಮ್ಮೆ ಪಾಲಿಸಿ. ಯುಗಗಳು ಕ್ಷಣಗಳಾಗಿ ಕಳೆದಿರುತ್ತವೆ. ಆಗ ಹೇಳಬಹುದು,
ನೀನು ನನ್ನ ಅಗಲಿ ಹೊರಡುವ
ಮುನ್ನ ಕಾಡಿದ
ಬೇಸರದ ಭಾವ ಈಗಿಲ್ಲ ಬಿಡು
ಎದೆ ಕಂಪಿಸಲು ಶುರುವಿಟ್ಟಿದ್ದು
ಕಳೆದುಹೋದ
ಆ ನಿನ್ನ ಕಳ್ಳನಗೆಗೆ, ಮಾದಕ ಸ್ಪರ್ಶಕ್ಕೆ...
- ಭಾಚಿ