Thursday, 5 May 2016

ಸಬಲ ಸ್ತ್ರೀ ಮದುವೆಯಲ್ಲೇಕೆ ಅಬಲೆಯಾಗ್ಬೇಕು?


ಅದು ಪ್ರತಿಷ್ಠಿತರೇ ನೆರೆದಿದ್ದ ಒಂದು ಸಂವಾದ ಕಾರ್ಯಕ್ರಮ. ಧರೆಗಿಳಿದ ರಂಬೆಯೇನೋ ಎನಿಸುವಷ್ಟು ಅಪರೂಪದ ಸುಂದರಿಯು ಪ್ರಶ್ನೆಗಳ ಮಳೆಗೈಯ್ಯುತ್ತಿದ್ದರೇ ಅಲ್ಲಿ ನೆರೆದಿದ್ದವರೆಲ್ಲ ಅವಳ ಅಂದವನ್ನು ಕಣ್ತುಂಬಿಕೊಳ್ಳುತ್ತಾ ಗಪ್‍ಚುಪ್ ಎನ್ನುವ ನಿಲುವಲ್ಲಿದ್ದುಬಿಟ್ಟಿದ್ದರು. ಇತ್ತ ಪ್ರಶ್ನೆಗೆ ಉತ್ತರಿಸಬೇಕಿದ್ದುದು ಪ್ರತಿಷ್ಠಿತ ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ದ ಬಿಗ್ ಬಿಸಿನೆಸ್‍ಮನ್ ರಿಲಯನ್ಸ್ ಇಂಡಸ್ಟ್ರಿ ಅಧ್ಯಕ್ಷ ಮುಖೇಶ್ ಅಂಬಾನಿ. ಆ ಚೆಲುವೆಯಿಂದ ಪ್ರಶ್ನೆಗಳು ಬಾಣಗಳಂತೆ ಬಂದು ನಾಟುತ್ತಿದ್ದರೆ, ಆತ ಮಾತ್ರ ಕೂಲ್ ಆಗಿಯೇ ಉತ್ತರಿಸುತ್ತಿದ್ದರು. ಅದು ಎಲ್ಲ ಏಳು-ಬೀಳುಗಳನ್ನು ಕಂಡು ದೈತ್ಯ ಎತ್ತರಕ್ಕೆ ಏರಿದವರ ಮುಖದಲ್ಲಿ ಮಾತ್ರವೇ ಕಾಣುವಂತಹ ಒಂದು ಕೂಲ್ ರಿಫ್ಲೆಕ್ಟು.
ಇಷ್ಟಕ್ಕೂ ಅವಳು ಹೇಳಿz್ದÉೀನು?  ಮುಖೇಶ್ ಅಂಬಾನಿ ಉತ್ತರಿಸಿz್ದÉೀನು ಕೇಳಿ ಅವರದೇ ಮಾತುಗಳಲ್ಲಿ ....
ನನಗೀಗ 25 ವರ್ಷ ವಯಸ್ಸು, ಸುಂದರವಾಗಿz್ದÉೀನೆ. ಹಾಗಂತ ಎಲ್ಲರೂ ಹೇಳ್ತಾರೆ. ಉತ್ತಮ ಜೀವನ ಶೈಲಿ, ಉತ್ತಮ ಅಭಿರುಚಿ ಹೊಂದಿz್ದÉೀನೆ. ಸಾಕೆನಿಸುವಷ್ಟು ಓದಿಕೊಂಡಿz್ದÉೀನೆ ಕೂಡ. ನಾನು ತುಂಬಾ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಬೇಕೆಂದಿz್ದÉೀನೆ. ಅದು ಅಂತಿಂಥಾ ಸಿರಿವಂತನಲ್ಲ. 100ಕೋಟಿಗೂ ಹೆಚ್ಚು ಆದಾಯವುಳ್ಳ ಅತಿ ಶ್ರೀಮಂತ ವ್ಯಕ್ತಿಯನ್ನ..! ವಾರ್ಷಿಕವಾಗಿ  ಕೋಟಿ ಲೆಕ್ಕಾಚಾರದಲ್ಲಿ ಸಂಬಳ ತೆಗೆಯುವವರು ಈಗ ಮಧ್ಯಮವರ್ಗ ಎಂಬ ಲೆಕ್ಕದಲ್ಲೇ ಪರಿಗಣಿಸಲ್ಪಡುತ್ತಾರೆ. ನನ್ನ ನಿರೀಕ್ಷೆಗಳೇನೂ ಅಷ್ಟೊಂದು ಜಾಸ್ತಿಯೇನಿಲ್ಲ. 100ಕೋಟಿ ಅಥವಾ ಅದಕ್ಕಿಂತ ಮೇಲ್ಪಟ್ಟು ದುಡಿಮೆಯುಳ್ಳ ವ್ಯಕ್ತಿಯನ್ನ ಮದುವೆಯಾಗಬೇಕು ಎಂದು ಬಯಸಿz್ದÉೀನೆ. ಇಲ್ಲಿರುವವರಲ್ಲಿ ಯಾರಾದರೂ ಅಷ್ಟು ಆದಾಯ ಪಡೆಯುವವರು ಇದ್ದಾರೆಯೇ? ಇದ್ದರೆ ಮದುವೆಯಾಗಿರುವವರೇ ಹೆಚ್ಚಿದ್ದೀರಿ ಅನಿಸುತ್ತೆ. ಆದರೆ ನಾನು ನಿಮ್ಮಂತಹ  ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಬೇಕು ಎಂದು ಬಯಸಿz್ದÉೀನೆ. ಇತ್ತೀಚೆಗೆ ನನಗೆ ಮದುವೆಯಾಗಲು ಸಂಬಂಧ ಒಂದು ಬಂದಿತ್ತು. ಅಮೆರಿಕದ ನ್ಯೂಯಾರ್ಕ್‍ನಲ್ಲಿರುವ ಪ್ರತಿಷ್ಠಿತ ಮನೆತನದ ಹುಡುಗ. ಆದರೆ ಆತನಿಗೆ ವಾರ್ಷಿಕ 50ಕೋಟಿ ಆದಾಯವಿದೆ. ನಾನಾದಕ್ಕೆ ಇಲ್ಲಿ ನೆರೆದಿರುವ ಗಣ್ಯರನ್ನ ಕೇಳಬಯಸುವುದು ಯಾವ ಕ್ಷೇತ್ರದಲ್ಲಿ ಅತಿ ಶ್ರೀಮಂತ ಹುಡುಗ ಸಿಗುತ್ತಾನೆ? ಯಾವ ವಯಸ್ಸಿನ ಹುಡುಗರನ್ನು ನನ್ನಂತಹ ಹುಡುಗಿಯರು ಟಾರ್ಗೆಟ್ ಮಾಡಬಹುದು? ಬಹಳಷ್ಟು ಬಾರಿ ನೊಡೋಕೆ ಸುಮಾರಾಗಿದ್ದವರ ಹತ್ತಿರ ಹೆಚ್ಚು ದುಡ್ಡಿರುತ್ತೆ. ಹೆಚ್ಚಿಗೆ ದುಡ್ಡಿರುವವರು ನೋಡೋಕೆ ಸುಮಾರಾಗಿರ್ತಾರೆ ಅಥವಾ ಚೆನ್ನಾಗಿಯೇ ಇರೋದಿಲ್ಲ ಆದರೂ, ಅವರಿಗೆ ಸುಂದರವಾದ ಹೆಂಡತಿಯಿರುತ್ತಾಳೆ.
ನೀವು ಹೇಗೆ ನಿಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿದಿರಿ? ಮತ್ತು ಏಕೆ?
ನನ್ನೆಲ್ಲ ಪ್ರಶ್ನೆಗಳಿಗೂ ಪ್ರಾಮಾಣಿಕವಾಗಿ ಉತ್ತರಿಸಿ. ಸದ್ಯ ನಾನು ಮದುವೆಯಾಗುವ ಆಕಾಂಕ್ಷೆ ಹೊಂದಿz್ದÉೀನೆ.
ಇತ್ತ ಮುಖೇಶ್ ಅಂಬಾನಿ ಕಡೆಯಿಂದ  ತಾತ್ವಿಕ ಪ್ರತಿಕ್ರಿಯೆ..
ನಿಮ್ಮ ಪ್ರಶ್ನೆಗಳು ಬಹಳ ಆಸಕ್ತಿಕರ ಎನಿಸಿದವು. ನಿಮ್ಮ ಹಾಗೆ ಇದೇ ಪ್ರಶ್ನೆಗಳು ಸಾಕಷ್ಟು ಹುಡುಗಿಯರ ತಲೆಯಲ್ಲಿ ಕೊರೆಯುತ್ತಿರುತ್ತವೆ. ನಾನೊಬ್ಬ ವೃತ್ತಿಪರ ಹೂಡಿಕೆದಾರನಾಗಿ ಇದಕ್ಕೆ  ಉತ್ತರಿಸಲು ಬಯಸುತ್ತೇನೆ. ಹೌದು, ನನ್ನ ವಾರ್ಷಿಕ ಆದಾಯ ನಿಮ್ಮ ಅವಶ್ಯಕತೆಗೂ ಮೀರಿದೆ 100 ಕೋಟಿಗೂ ಅಧಿಕ. ಇದರಿಂದಲೇ ನಿಮಗೆ ತಿಳಿಯಬಹುದು ನಾನು ಸಿಗುವ ಸಮಯವನ್ನು ಆದಷ್ಟು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಬಯಸುತ್ತೇನೆ. ಒಬ್ಬ ವ್ಯಾಪಾರದ ವ್ಯಕ್ತಿ ನಿಮ್ಮನ್ನು ಮದುವೆಯಾಗಲು ಬಯಸಿದರೆ ಅದು ಕೆಟ್ಟ ನಿರ್ಧಾರ. ಉತ್ತರ ತುಂಬಾ ಸರಳ. ಯಾವುದೇ ವ್ಯಾಪಾರದ ಮನಸ್ಥಿತಿಯುಳ್ಳ ವ್ಯಕ್ತಿಯು  ತನ್ನ ಹೂಡಿಕೆ ದಿನದಿಂದ ದಿನಕ್ಕೆ ವೃದ್ಧಿಯಾಗಬೇಕೆಂದು ಬಯಸುತ್ತಾನೆ. ನೀವು ಹೇಳುವುದು, ನಾನು ಅತಿ ಸೌಂದರ್ಯವತಿ. ಅದಕ್ಕಾಗಿ ನನ್ನನ್ನು ಮದುವೆಯಾಗಬೇಕು ಅಂತ. ಆದರೆ, ಅದೇ ನಿಮ್ಮ ಅತಿದೊಡ್ಡ ಸಮಸ್ಯೆ. ನಿಮ್ಮ ಸೌಂದರ್ಯ ದಿನಗಳೆದಂತೆಲ್ಲಾ ಮಸುಕಾಗುತ್ತಾ ಹೋಗುತ್ತೆ. ಅದು ಯಾವ ಕಾಲಕ್ಕೂ ವೃದ್ಧಿಯಾಗಲಾರದು. ಅರ್ಥಶಾಸ್ತ್ರದ ದೃಷ್ಟಿಕೋನದಿಂದ ನೋಡುವುದಾದರೆ, ಭೂಮಿ ಅಥವಾ ಇನ್ನಾವುದೇ ತೆರನಾದ ಆಸ್ತಿ ಎನಿಸುವುದರ ಮೇಲೆ ಹೂಡಿಕೆ ಮಾಡಿದರೆ 10 ವರ್ಷಗಳ ನಂತರ ಅದು ಕನಿಷ್ಠ ದುಪ್ಪಟ್ಟಂತೂ ಆಗಿರಲೇಬೇಕು. ಇದು ಅರ್ಥಶಾಸ್ತ್ರದ ಸಿಂಪಲ್ ಮೆಥಡ್. ಪ್ರತಿಯೊಬ್ಬ ಬಿಸಿನೆಸ್ ಮ್ಯಾನ್ ಕೂಡ ಯೋಚಿಸುವುದು ಇದನ್ನೇ. ಯಾವ ಹೂಡಿಕೆಯು ದುಪ್ಪಟ್ಟಾಗಬೇಕು, ನೂರುಪಟ್ಟಾಗಬೇಕೆಂದು. ಅದು ತಕ್ಷಣಕ್ಕೆ ಆಗದಿದ್ದರೂ, ಭವಿಷ್ಯದ ದೃಷ್ಟಿಯಿಂದಲಾದರೂ, ಮಾರಾಟ ಮಾಡಿದರೆ ಅದರಿಂದ ಆದಾಯ ವೃದ್ಧಿಯಾಗಬೇಕೆಂದು ಬಯಸುತ್ತಾರೆ. 100 ಕೋಟಿ ವಾರ್ಷಿಕ ಆದಾಯ ಇರುವವರ್ಯಾರು ಮೂರ್ಖರಲ್ಲ. ಅಂತಹವನೇ ಬೇಕೆಂದು ಕೂತರೆ ಅವನು ನಿಮ್ಮೊಂದಿಗೆ ಡೇಟಿಂಗ್ ಮಾಡಲು ಬಯಸಬಹುದು, ಮದುವೆಯಾಗಲು ಬಯಸುವುದಿಲ್ಲ.  ಸಮಯಕ್ಕೆ ಮೌಲ್ಯವಿತ್ತೇ ಅಷ್ಟೆಲ್ಲಾ ಗಳಿಸಲು ಅವರಿಗೆ ಸಾಧ್ಯವಾಗಿರುತ್ತೆ. ಅದರಿಂದ ಪ್ರತಿಯೊಂದರಲ್ಲೂ ಲಾಭವನ್ನು ನಿರೀಕ್ಷಿಸುವುದು ತಪ್ಪಲ್ಲ. ಯಾಕೆಂದರೆ ಅದು ಅವರು ಸಮಯಕ್ಕೆ ಕೊಡುವ ಪ್ರಾಶಸ್ತ್ಯ. ಹಾಗಾಗಿ ಅತಿ ಶ್ರೀಮಂತ ವ್ಯಕ್ತಿಯನ್ನು ಹುಡುಕುತ್ತಾ ನಿಮ್ಮ ಜೀವನದ ಅಮೂಲ್ಯ ಸಮಯವನ್ನು ಹಾಳುಮಾಡಲು ಬಿಡಬೇಡಿ. ಅದರ ಬದಲಾಗಿ ನೀವೇ ಆ ನೂರು ಕೋಟಿ ಸಂಪಾದಿಸಲು ಏನೆಲ್ಲಾ ಸಾಧ್ಯ ಎಂದು ಯೋಚಿಸಿ, ದುಡಿಯಲು ಶುರು ಮಾಡಿ. ಆಗ ಅದಕ್ಕೂ ಮೀರಿದ ಶ್ರೀಮಂತ ಹುಡುಗ ನಿಮ್ಮನ್ನು ಮದುವೆಯಾಗಲು ಬರುತ್ತಾನೆ. ಅದು ಕೂಡ ಆರ್ಥಿಕ ವೃದ್ಧಿಯz್ದÉೀ ಆದರೂ, ಎಲ್ಲವೂ ಒಳ್ಳೆಯದೇ ಆಗುತ್ತದೆ. ಯಾಕೆಂದರೆ ಅಲ್ಲಿ ನೀವು ಖಂಡಿತ ಅವನಿಗೆ ಸಮನಾಗಿರುತ್ತೀರಿ. ಎಲ್ಲವೂ ಶುಭವಾಗಲಿ..
ವ್ಹಾ... ಎಂಥಾ ತೀಕ್ಷ್ಣ ಪ್ರತಿಕ್ರಿಯೆ..! ಪ್ರತಿಯೊಬ್ಬ ಹೆಣ್ಣುಮಗಳು ಯೋಚಿಸಬೇಕಾದ ವಿಷಯವಿದು. ಈಗಿನ ಕಾಲದ ಯುವತಿಯರು ಒಂದಲ್ಲ ಒಂದು ರೀತಿಯಲ್ಲಿ  ಮುತ್ತುಗಳೇ. ಕಾಲಕ್ಕೆ ತಕ್ಕಂತೆ ಪ್ಯಾಷನ್, ಬೇಕೆನಿಸುವಷ್ಟು ವಿದ್ಯೆ, ಅದಕ್ಕೆ ತಕ್ಕುದಾದ ಕೆಲಸ, ಕೈ ತುಂಬಾ ಸಂಬಳ.. ತನಗೆ ಬೇಕೆನಿಸಿದ್ದನ್ನು ತಾನೇ ಗಳಿಸಿಕೊಳ್ಳುವ ಸದೃಢತೆ ಎಲ್ಲವೂ ಅವಳಿಗೆ ಲಭ್ಯ. ಆದರೆ, ಮದುವೆಯ ವಿಷಯ ಬಂದಾಗ ಮಾತ್ರ, ಆಕೆ ಸ್ವಲ್ಪ ವೀಕ್ ಆಗಿರೋಕೆ ಇಷ್ಟಪಡುತ್ತಾಳೆ. ತನಗಿಂತಲೂ ನೂರುಪಟ್ಟು  ಹೆಚ್ಚಿನವ ಸಿಗಬೇಕು ಎಂಬ ಯೋಚನೆಯ ಜಾಗಕ್ಕೆ ತಾನೇ ಅದನ್ನು ಸಂಪಾದಿಸಿಬಿಡಬಲ್ಲೆ ಎಂಬ ಭಾವ ಮೂಡಿಸಿಕೊಳ್ಳುವುದೇ ಇಲ್ಲ. ಹಾಗೆ ಯೋಚಿಸಿದ್ರೂ, ಅದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅದನ್ನೇ ಎಲ್ಲ ಹೆಣ್ಣುಮಕ್ಕಳು ಅಳವಡಿಸಿಕೊಂಡು ಬಿಟ್ಟರೆ, ಸಮಸ್ತ ಹೆಣ್ಣುಕುಲವೇ ಅಪರೂಪದ ಮುತ್ತುಗಳಾಗಿಬಿಡುತ್ತವೆ. ಪುರುಷನೊಂದಿಗೆ ಸಮಾನತೆ ಬೇಡುವ ನಾವುಗಳು ಕೂಡ ಹಾಗೇ ಯೋಚಿಸಿದ್ರೆ, ಸಮಾಜದಲ್ಲಿ ಸಮಾನತೆ ತನ್ನಿಂತಾನೇ ಮೂಡುವುದರಲ್ಲಿ ಆಶ್ಚರ್ಯವಿಲ್ಲ.

- ಭಾಗ್ಯಚಿಕ್ಕಣ್ಣ