Friday, 5 December 2014

‘ಅವಳು’




‘ಅವಳು ’
ಅವಳು’
ಅವಳೆಂದರೆ
ಮರುಗುವವಳು, ಕೊರಗುವವಳು
ಮಾತು-ಮಾತಿಗೂ ಅಳುತ್ತಾ ಕೂರುವವಳು;
ಅವಳೆಂದರೆ
ತಗ್ಗುವವಳು, ಬಗ್ಗುವವಳು
ಎಲ್ಲದಕ್ಕೂ ತಲೆಯಾಡಿಸುತ್ತಲೇ ಇರುವವಳು
ಭಾವನೆಗಳಿಗೆ ಶೀಘ್ರ ಪ್ರತಿಕ್ರಿಯಿಸುವವಳು;
ಅವಳೆಂದರೆ
ಮಾತೃಸ್ವರೂಪಿ,
ದಯಾಮಯಿ, ಕ್ಷಮಯಾಧರಿತ್ರಿ
ಅಬ್ಬಾ…! ಇನ್ನೂ ಅದೆನೇನೋ…,
ಹೆಣ್ಣೆಂದರವಳಾ?
ಅವಳೆಯಾ ನಿಮ್ಮ ಆ ಹೆಣ್ಣೆಂಬ ರೂಪ!
ಹೆಣ್ಣೆಂದರವಳು
ಕೈಲಾಗದವಳಾ? ಕೈಮುಗಿಯುವವಳಾ?
ಕೈ ಕಟ್ಟಿ ಕೂರುವವಳಾ? ಎಲ್ಲರ ಮುನಿಸನ್ನು ತಡೆಯುವವಳಾ?
ಹಡೆಯಲು ಯೋಗ್ಯಳಾದವಳಾ?
ಹೆಣ್ಣೆಂದರವಳಾ?
ಅವಳೆಯಾ ನಿಮ್ಮ ಆ ಹೆಣ್ಣೆಂಬ ಸ್ವರೂಪ!
ಸೂಕ್ಷ್ಮ ಮನಸ್ಸಿನವಳು
ಅಂದ-ಚೆಂದಕ್ಕೆ ಮನಸೋಲುವವಳು
ಅಲಂಕಾರದಲ್ಲೇ ದಿನಕಳೆವವಳು
ಕನ್ನಡಿಯನ್ನು ಸಂಗಾತಿಯಂತೆ ಪ್ರೀತಿಸುವವಳು
ಅವಳೆಂದರೆ ಉಬ್ಬು-ತಗ್ಗುಗಳ ರೂಪ
ಸುಮ್ಮಸುಮ್ಮನೆ ವಸ್ತ್ರ ಸರಿಪಡಿಸಿಕೊಳ್ಳುವವಳು
ಬಲು ನಾಜೂಕಿನವಳಪ್ಪ ಆ ಹೆಣ್ಣು..
ಹೆಣ್ಣೆಂದರೇ ಅವಳಾ?
ಅವಳೆಯಾ ನಿಮ್ಮ ಆ ಹೆಣ್ಣೆಂಬ ಸಾದೃಶ್ಯ!

No comments:

Post a Comment