Wednesday, 31 August 2016

ಸೋಲೇ ಗೆಲುವಾಗಿ ದಕ್ಕುವುದು ಅಂದ್ರೆ.....!



                ಜೀವನದಲ್ಲಿ ಪದೇಪದೆ ಫೇL ಆದವರು ಸೋಲಿನ ರುಚಿ, ಕಹಿ, ಸಿಹಿ ಎಲ್ಲವನ್ನೂ ಅರಿತಿರುತ್ತಾರೆ. ಸೋಲನ್ನು ದಕ್ಕಿಸಿಕೊಂಡು, ಅದರ ಅವಮಾನವನ್ನು ಸಹಿಸಿಕೊಂಡು ಪುನಃ ಮೊದಲಿನಂತಾಗಲು ಪ್ರಯತ್ನಿಸುತ್ತಾರೆ.......
 - ಮೊನ್ನೆ ಅದ್ಯಾಕೋ ಈ ಸಾಲುಗಳು ಬಹಳ ಕಾಡಿದವು.
ಆಗಷ್ಟೇ ಡಿಗ್ರಿ ಪರೀಕ್ಷೆಗಳು ಮುಗಿದಿದ್ದವು. ಇನ್ನೇನು ಮುಂದಿನ ಭವಿಷ್ಯದ ಬಗ್ಗೆ ನಿಖರವಾದ ಯೋಜನೆಗಳನ್ನು ಮಾಡಬೇಕೆಂದು ಎಂಟ್ಹತ್ತು ಗೆಳತಿಯರು ಒಂದೆಡೆ ಸೇರಿ ಒಂದೊಂದು ಮಾರ್ಗವಾಗಿ ಚರ್ಚೆಗಳನ್ನು ಅರಹುತ್ತಾ ಕುಳಿತಿದ್ದರೆ, ಸಂಧ್ಯಾ ತೀರಾ ಮಂಕಾಗಿ ಕಂಡಳು. ಯಾವುದಕ್ಕೂ ಪ್ರತಿಕ್ರಿಯಿಸದೆ ತನ್ನ ಪಾಡಿಗೆ ತಾನು ಏನನ್ನೋ ಯೋಚಿಸುತ್ತ, ಮಂಡಿಗೆ ತಲೆಯೂರಿ ಪ್ರಪಂಚದ ಪರಿವೆಯೇ ಇಲ್ಲದಂತೆ ಬೇರಾವುದೋ ಲೋಕಕ್ಕೆ ಜಿಗಿದಿದ್ದಳು. ಪರೀಕ್ಷೆಗಳು ಮುಗಿದಿದ್ದರಿಂದ ಕೆಲವರಿಗೆ ಮನೆಯ ಸಂಪೂರ್ಣ ಜವಾಬ್ದಾರಿ ಹೊರುವ ಅನಿವಾರ್ಯ, ಇನ್ನು ಕೆಲವರಿಗೆ ಮದುವೆ ಮಾಡಿಕೊಳ್ಳಲೇಬೇಕಾದ ಕರಾರಿಗೆ ಮೊಹರು ಬಿz್ದÁಗಿತ್ತು. ಒಬ್ಬರಿಗೆ ಒಂದೊಂದು ದಾರಿ ಕಡಿದು ಬಿದ್ದದ್ದು ಅಲ್ಲಿ ಸ್ಪಷ್ಟವಾಗಿದ್ದರೂ, ಇನ್ನೂ ಕೆಲವರಿಗೆ ಮುಂದೇನು ಮಾಡಬೇಕೆಂಬ ಯಾವುದೇ ಯೋಜನೆ ಯೋಚನೆಗಳಿರಲಿಲ್ಲ. ಅದರಲ್ಲಿ ಒಂದಷ್ಟು ಮಂದಿ ಅನುಕೂಲಸ್ಥರು ಇದ್ದರು. ಮತ್ತೂ ಕೆಲವರು ಏನೇನೂ ಇಲ್ಲದ ಅಸಹಾಯಕರು ತಮ್ಮ ಚಿಕ್ಕಪ್ಪ, ಅತ್ತೆ ಮನೆಯಲ್ಲಿದ್ದುಕೊಂಡು ಓದಿಕೊಂಡಿದ್ದವರು.

ಇಷ್ಟೆಲ್ಲ ಇರುವಾಗ ಸಂಧ್ಯಾಗೆ ಎಲ್ಲವೂ ಆರಾಮಿದೆ. ಅಪ್ಪನಿಗೆ ಸರ್ಕಾರಿ ನೌಕರಿ, ಅಮ್ಮ ಗೃಹಿಣಿ. ತನಗಿಂತಲೂ ಎಂಟು ವರ್ಷಕ್ಕೆ ಚಿಕ್ಕವನಾದ ತಮ್ಮ. ಈಕೆಯ ಕುಟುಂಬ ಅತ್ಯಂತ ಸುಖೀ ಎಂದೇ ಭಾವಿಸಿz್ದÉವು. ಹೀಗಿರುವಾಗ ಈಕೆಗೇನು ತಲೆನೋವು? ಅಂದುಕೊಳ್ಳುತ್ತಿರುವಾಗಲೇ ಅವಳ ಕಣ್ಗಳು ನೀರಿನಿಂದ ತುಂಬಿ ಜಿನುಗುತ್ತಿದ್ದವು. ಬಂದಾಗಿನಿಂದ ಅವಳತ್ತ ಅಷ್ಟಾಗಿ ಗಮನ ಕೊಡದೆ ಇದ್ದ ನಾವು ಈಗ ಏಕಾಏಕಿ ಅವಳ ಸದ್ಯದ ಪರಿಸ್ಥಿತಿಗೆ ಕಾರಣ ತಡಕಾಡಲೇಬೇಕಿತ್ತು. ಏನಾಯ್ತು ಎಂದು ಕೇಳಿದರೆ ಮಾತಿಲ್ಲ ಕತೆಯಿಲ್ಲ. ಕಣ್ಗಳು ಮಾತ್ರ ಮತ್ತದೇ ಧಾರಾಕಾರ ನೀರಿನಿಂದ ತುಂಬಿ ತುಳುಕುತ್ತಿವೆ. ಸದ್ಯ ಸಮಾಧಾನವಾಗಿ ಸಮಸ್ಯೆಯನ್ನು ಹೇಳಿಕೊಳ್ಳುವ ಪರಿವೆಯಲ್ಲಿ ಆಕೆಯೂ ಇಲ್ಲದ್ದರಿಂದ ನಾವೂ ಕೊಂಚ ಗಮನ ಬೇರೆ ಕಡೆ ಸರಿಸಲು ತ್ರಾಸಪಟ್ಟು ಸುಮ್ಮನಾದೆವು. ಒಂದು ವಾರದ ಬಳಿಕ ಎಲ್ಲರೂ ಮತ್ತದೇ ಸ್ಥಳಕ್ಕೆ ಸೇರುವುದು ಎಂಬ ಷರತ್ತು ಹಾಕಿ, ಎಲ್ಲರೂ ಅವರವರ ಮನೆಗೆ ಹೊರಟುಬಿಟ್ಟೆವು.
ನಾನು, ಮತ್ತೊಬ್ಬಳು ಗೆಳತಿ, ಸಂಧ್ಯಾ ಮೂವರ ಮನೆಯೂ ಒಂದೇ ಹಾದಿಯಲ್ಲಿದ್ದುದರಿಂದ ಅಂದು ನಡೆದೇ ಮನೆ ಮುಟ್ಟಲು ನಿರ್ಧರಿಸಿ ಅಲ್ಲಿಂದ ಕಾಲ್ಕಿತ್ತೆವು. ಜತೆಯಲ್ಲಿದ್ದ ಗೆಳತಿಯ ಮನೆ ಸಿಕ್ಕಿತು. ಸಂಧ್ಯಾ ಆ ಹೊತ್ತಿಗೆ ಕೊಂಚ ನಿರಮ್ಮಳವಾಗಿದ್ದಳು. ಇನ್ನೇನು ನಾಳೆಯಿಂದ ಕಾಲೇಜಿಲ್ಲ ಮತ್ತೆ ಈ ಹಾದಿಯಲ್ಲಿ ಬರುವುದು ಇನ್ನ್ಯಾವಾಗಲೋ ಅಂದುಕೊಂಡು ವೇಗದ ಹೆಜ್ಜೆ ನಿಧಾನದ ಗತಿಗೆ ಅರಿವಿಲ್ಲದೆಯೇ ಬಂದು ನಿಂತಿತ್ತು. ಇಬ್ಬರಲ್ಲೂ ಒಂಥರಾ ಬೇಸರದ ಭಾವ. ಹಾದಿಯ¯್ಲÉೀ ಒಂದು ಸಣ್ಣ ಪಾರ್ಕ್. ಇಬ್ಬರೂ ಅಲ್ಲಿ ಒಂದಷ್ಟು ಹೊತ್ತು ಕುಳಿತು ಹೊರಡೋಣ ಎಂದುಕೊಂಡು ಉದ್ಯಾನದ ಒಳಹೊಕ್ಕೆವು. ಆಗ ಭೋರ್ಗರೆಯಲು ಅನುವಾಯಿತು ಸಂಧ್ಯಾಳ ನೋವಿನ ಒಡಲು. ಯಾವುದೋ ಹುಡುಗನ ಗುಂಗಿಗೆ ಬಿದ್ದು, ಆಕೆ ಸಂಪೂರ್ಣ ಹೈರಾಣಾಗಿದ್ದಳು. ಇದೇ ಹುಚ್ಚಲ್ಲಿ ಪರೀಕ್ಷೆಗಳಿಗೆ ಏನೇನೂ ಸಿದ್ಧತೆ ನಡೆಸದೆ ಬರೆದು ಬಂದಿದ್ದಳು. ಅವಳಿಗೆ ಗೊತ್ತಿತ್ತು, ತಾನು ಪಾಸ್ ಆಗಲಾರೆನೆಂದು. ಇತ್ತ ಸಿಗದ ಹುಡುಗ. ಹಿಂದಿನ ಎಲ್ಲ ಅಂತಿಮ ಪರೀಕ್ಷೆಗಳಲ್ಲೂ ರ್ಯಾಂಕ್ ವಿದ್ಯಾರ್ಥಿ ಅಲ್ಲದಿದ್ದರೂ, ಫ¸್ಟï ಕ್ಲಾಸ್‍ಗೆ ಒಂದಂಕ ಕಡಿಮೆ ಇಲ್ಲದೆ ಪಡೆಯುತ್ತ ಬಂದಿದ್ದ ಆಕೆ ಮೊದಲ ಬಾರಿ ದಾರಿ ತಪ್ಪಿದ್ದಳು. ಅದು ಕೇವಲ ಒಬ್ಬ ಹುಡುಗನೆಡೆಗಿನ ಆಕರ್ಷಣೆಯ ನಿಮಿತ್ತ.
ವಿಷಯ ಹೇಳುತ್ತಾ ಆಕೆ ಕುಳಿತಿದ್ದರೆ ನನಗೇನು ಆಘಾತವಾಗಲಿಲ್ಲ. ನಾನು ಇಂತಹ ಪರಿಸ್ಥಿತಿಗಳನ್ನು ಎದುರಿಸಿಯಾಗಿತ್ತು. ಪಿಯುಸಿಯಲ್ಲಿ ಜೊತೆಗೆ ಬರುತ್ತಿದ್ದ ಪಕ್ಕದ ರಸ್ತೆಯ ಗೆಳತಿ ಯಾವುದೋ ಹುಡುಗನೊಟ್ಟಿಗೆ ಸದ್ದಿಲ್ಲದೆ ಕಾಲ್ಕಿತ್ತಾಗಲೇ ನಮ್ಮನೆಯಲ್ಲಿ ಭೂಕಂಪವಾಗಿತ್ತು. ಅವಳ್ಯಾರೋ ಮಾಡಿದ ತಪ್ಪಿಗೆ ನನ್ನನ್ನು ಬಲಿಕೊಡಲು ಮನೆಯಲ್ಲಿ ಹತಾರ ರೆಡಿ ಮಾಡಿಬಿಟ್ಟಿದ್ದರು. ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಿ ಪದವಿಗೆ ಅರ್ಧ ವರ್ಷದ ನಂತರ ಅಡ್ಮಿಷನ್ ಆಗಿ ಪರೀಕ್ಷೆ ಎದುರಿಸಿ ಸೆಕೆಂಡ್ ಕ್ಲಾಸ್‍ನಲ್ಲಿ ಪಾಸ್ ಕೂಡ ಆಗಿz್ದÉ. ಯಾಕೋ ಇವಳ
ವಿಷಯ ದೊಡ್ಡದಾಗಿ ಕಾಡಲಿಲ್ಲ. ಆಕೆಯೇನೂ ಪ್ರೀತಿಗೆ ಬಿದ್ದಿರಲಿಲ್ಲ. ಆಕರ್ಷಣೆಗೇ ಅಷ್ಟು ಹೈರಾಣಾಗಿ ಹೋಗಿದ್ದಳು. ಅದು ವಯಸ್ಸಿನ ತಪ್ಪಷ್ಟೇ ಎಂದುಕೊಂಡು ತಕ್ಕಮಟ್ಟಿಗೆ ಗೊತ್ತಿರುವ ಬಗೆಯಲ್ಲಿ ತಿಳಿಹೇಳಿ ಆ P್ಷÀಣಕ್ಕೆ ಸಮಾಧಾನವನ್ನೇನೋ ಮಾಡಿ ಎದ್ದು ಬಂದಿz್ದÉ. ಆಕೆ ಎಣಿಕೆಯಂತೆಯೇ ಎಲ್ಲ ಪರೀಕ್ಷೆಗಳಲ್ಲೂ -ಲï ಆಗಿದ್ದಳು. ಆದರೆ, ಆ ಪರೀಕ್ಷೆ ಬರೆಯಲಿಕ್ಕೆ ಮತ್ತೆ ಒಂದು ವರ್ಷ ಕಾಯಬೇಕಾಯ್ತು.
ಬಿಡುವಿನ ಆ ಒಂದು ವರ್ಷ ಆಕೆ ಟೈಪಿಂಗ್, ಶಾರ್ಟ್ ಹ್ಯಾಂಡ್, ಕಂಪ್ಯೂಟರ್ ಕ್ಲಾಸ್, ಟೈಲರಿಂಗ್ ಕ್ಲಾಸ್ ಅಂತ ಬಿಜಿಯಾಗಿಬಿಟ್ಟಳು. ಅಲ್ಲದೆ, ಮತ್ತದೇ ವಿಷಯಗಳನ್ನು ಮನನ ಮಾಡಿದ್ದರ -ಲವಾಗಿ ಎಲ್ಲ ವಿಷಯಗಳಲ್ಲೂ ತೊಂಭತ್ತರಾಚೆಗೂ ಸ್ಕೋರï ಮಾಡಿದಳು. ಅವತ್ತು ನಾನಷ್ಟೇ ಅಲ್ಲ, ಇತರ ಗೆಳತಿಯರು ಕೂಡ ನಿಬ್ಬೆರಗಾಗಿ ಆಕೆಯತ್ತ ನೋಡಿz್ದÉವು. ಈಗ ಆಕೆಗೆ ಪದವಿ ನಿಮಿತ್ತದ ಒಂದು ಕೆಲಸವಲ್ಲ, ನಾನಾ ಆಯ್ಕೆಗಳು. ಬದುಕಿನ ಒಂದು ತಪ್ಪು, ಒಂದು ಸೋಲು, ಆಕೆಗೆ ಅದೆಷ್ಟು ಬಲ ತುಂಬಿತ್ತು ಎಂದರೆ ಮುಂದೆಂದೂ ಸೋಲಲೇಬಾರದು ಎಂಬಂತೆ ಮುಂದಕ್ಕಡಿಯಿಟ್ಟಿದ್ದಳು. ಆ ಸೋಲನ್ನು ಅವಳು ಅದೆಷ್ಟು ಸದ್ಬಳಕೆ ಮಾಡಿಕೊಂಡಿದ್ದಳು ಎಂದರೆ ಯಶಸ್ಸಿಗೆ ಇದೇ ಮೆಟ್ಟಿಲು ಎಂಬಂತೆ ಮೇಲೇರಿದ್ದಳು. ಎಷ್ಟೋ ಸಲ ಸೋಲಿಗಿಂತ, ಸೋಲಿನ ಹೊಡೆತಕ್ಕೆ ನರಳುವವರನ್ನು ನೋಡುವ ಹೊತ್ತ¯್ಲÉಲ್ಲ, ಸೋತು ಗೆದ್ದ ಸ್ಫೂರ್ತಿಯ ಸೆಲೆ ಸಂಧ್ಯಾ ನೆನಪಾಗುತ್ತಾಳೆ. ಅವಳು ಸೋಲನ್ನು ಗೆಲುವಾಗಿ ದಕ್ಕಿಸಿಕೊಂಡ ಪರಿಗೆ ನಿಜಕ್ಕೂ ತಲೆ ಬಾಗಲೇಬೇಕೆನಿಸುತ್ತದೆ.

- ಭಾಚಿ

No comments:

Post a Comment