ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವನ ಜತೆ ಬ್ರೇಕಪ್ ಆಗಿದೆ, ಓದು ಯಾಕೋ ತಲೆಗೆ ಹತ್ತುತ್ತಲೇ ಇಲ್ಲ, ಇಷ್ಟಪಟ್ಟಿದ್ದ ಕೆಲಸ ಕೈ ತಪ್ಪಿಹೋಗಿದೆ, ಅಪ್ಪ-ಅಮ್ಮ ಸರಿಯಾಗಿ ಬೆಂಬಲ ನೀಡುತ್ತಿಲ್ಲ, ತನ್ನ ಬದುಕು ತಾನೇ ಕಟ್ಟಿಕೊಳ್ಳುವ ಸಮಯದಲ್ಲೂ ಇನ್ನೊಬ್ಬರಿಗೆ ಹೊರೆಯಾಗಿ ನಿಂತಿz್ದÉೀನೆ, ಇನ್ನೂ ಏನನ್ನೂ ಸಾಧಿಸಿಲ್ಲ ಎಂಬ ಕಾರಣಕ್ಕೆ ಈ ಸಮಾಜ ಕೂಡ ಕೀಳಾಗಿ ಕಾಣುತ್ತಿದೆ...ಸಾಮಾನ್ಯವಾಗಿ ಯುವಜನತೆಗೆ ಎದುರಾಗುವ ಸಮಸ್ಯೆಗಳ ಪಟ್ಟಿಯಲ್ಲಿ ಇವುಗಳಿಗೆ ಮೊದಲ ಸ್ಥಾನ. ಖುಷಿಗೂ, ದುಃಖಕ್ಕೂ ಬಹುಬೇಗ ಸ್ಪಂದಿಸುವ ಯುವಮನಸುಗಳನ್ನು ಈ ಬದುಕನ್ನ ಪ್ರೀತಿಸೋದಕ್ಕೆ ಒಗ್ಗಿಸುವುದು ಅಂದ್ರೆ ಸುಖಾಸುಮ್ಮನೆಯ ಮಾತಲ್ಲ ಬಿಡಿ. ಆದರೆ, ಅದೆಂತಹ ದುರಂತದ ಅಧ್ಯಾಯಕ್ಕೂ ಅಂತ್ಯ ಹಾಡಿ, ಹೊಸ ಅಧ್ಯಾಯ ಪ್ರಾರಂಭಿಸಿ ಬದುಕನ್ನ ಚಾಲೂ ಮಾಡಿಬಿಡಬಹುದು. ಎಲ್ಲದಕ್ಕೂ ಕೊಂಚ ಸಾವಧಾನ ಬೇಕಷ್ಟೆ. ಅದಕ್ಕೆ `ಡಿಯರ್ ಜಿಂದಗಿ' ಚಿತ್ರ ಉತ್ತಮ ಉದಾಹರಣೆ. ಅದರ ಒಂದಷ್ಟು ಸಂದೇಶಗಳ ಕ್ವಿಕ್ ಸಿರಪ್ ನಿಮಗಾಗಿ..
1. ಆದದ್ದು ಆಗಲಿ, ಮುಂದಿನ ಆಯ್ಕೆ ಸರಿ ಇರಲಿ:
ಸಣ್ಣ ಆಘಾತಕ್ಕೂ ಜೀವನವೇ ಬರಿದಾಯಿತು ಎಂಬಂತೆ ವರ್ತಿಸುವ ಯುವ ಸಮುದಾಯಕ್ಕೆ, ಬಿದ್ದಷ್ಟೇ ವೇಗವಾಗಿ ಫಿನಿಕ್ಸ್‍ನಂತೆ ಎದ್ದು ಸಾಗಿದ ಕೆಲವು ಸಾಧಕರ ಜೀವನದ ಕಥೆಗಳು ಪ್ರೇರಣೆಯಾಗಬಲ್ಲದು. ಇಂದು ಏಟಿನ ಮೇಲೆ ಏಟು ಬೀಳುತ್ತಿದೆ ಎಂದರೆ, ಮುಂದೆ ತಾನೂ ಅದ್ಭುತವಾಗಿ ಬದುಕಬಲ್ಲೆ ಎಂಬುದನ್ನು ನೆನಪಿಡಿ. ಸಾಧಕರ ಕಥೆಗಳನ್ನು ಓದಿ. ಓದಲು ಬೋರ್ ಅನಿಸಿದರೆ, ಅಂತಹವರ ಕೆಲವು ಮಾತುಗಳು, ಸ್ಫೂರ್ತಿದಾಯಕ ನುಡಿಗಳು ಯೂಟ್ಯೂಬ್‍ನಲ್ಲಿ ಲಭ್ಯ. ತಲೆ ತುಂಬ ಯೋಚನೆಗಳೇ ತುಂಬಿ ಹಾಳು ಮಾಡುತ್ತಿವೆ ಅಂದಾಗ ಇಂತಹವುಗಳು ನಿಜಕ್ಕೂ ಕ್ವಿಕ್ ಟಾನಿಕೇ ಸರಿ. ಮುಂದಡಿ ಇಡಲು ಇದಕ್ಕಿಂತ ಉತ್ತಮ ಮಾರ್ಗದರ್ಶನವುಂಟೆ ?
2. ನಿಮ್ಮೊಳಗಿನ 5 ಜನರನ್ನು ನಿಯಂತ್ರಿಸಿ, ಬಡಿದೆಬ್ಬಿಸಿ.
ಯಾವಾಗಲೂ ನಾವು ಹೊರಗಿನವರನ್ನು ನಿಯಂತ್ರಿಸುವುದಕ್ಕೆ ಉತ್ಸುಕರಾಗಿರುತ್ತೇವೆ. ಅದು ಎಷ್ಟು ದಿನ ಸಾಧ್ಯವಾದೀತು? ಆದರೆ ನಮ್ಮೊಳಗೇ ಬಂಧಿಯಾಗಿರುವ ಭಾವಗಳನ್ನು ಮುಕ್ತಗೊಳಿಸುವುದು, ಹಿಡಿದಿಡುವುದರ ಬಗ್ಗೆ ಸಣ್ಣ ಯೋಚನೆ ಕೂಡ ಮಾಡುವುದಿಲ್ಲ. ಅದೇ ನಮ್ಮಲ್ಲಿನ ಶಕ್ತಿ, ದೌರ್ಬಲ್ಯ, ಪ್ರತಿಭೆ, ಕೋಪ, ಅನುಕೂಲ. ನಮ್ಮ ಶಕ್ತಿ, ದೌರ್ಬಲ್ಯ ನಮಗೆ ಮಾತ್ರವೇ ಗೊತ್ತಿರುತ್ತೆ. ಅದನ್ನು ಎಲ್ಲಿ ಹೇಗೆ ಬಳಸಿಕೊಳ್ಳಬೇಕು, ಹಿಡಿದಿಡಬೇಕು ಎಂಬುದರ ಅರಿವಿರಲಿ. ಪ್ರತಿಭೆಯ ಅನಾವರಣಕ್ಕೆ ಇದು ಕೂಡ ಪೂರಕವಾದೀತು. ಇನ್ನು ಕೋಪದ ಮಟ್ಟ ಎಷ್ಟಿರಬೇಕು? ನಾವು ಎಲ್ಲಿದ್ದರೆ, ಹೇಗಿದ್ದರೆ ಆರಾಮಾಗಿ ಇರಬಲ್ಲೆವು ಎಂಬುದರ ಮೇಲೆ ನಿಗಾ ಇರಲಿ.
3. ನಿಮ್ಮ ಬಗ್ಗೆ ನೀವು ತಿಳಿಯಿರಿ:
ಯಾವಾಗಲೂ ಸ್ನೇಹಿತರು, ಅಕ್ಕಪಕ್ಕದವರ ಬಗ್ಗೆಯೇ ಯೋಚಿಸುತ್ತ, ತಿಳಿಯಲು ತವಕಿಸುತ್ತ ಇರುವ ನಾವು, ನಮ್ಮ ಬಗ್ಗೆ ತಿಳಿಯುವುದಕ್ಕೆ ಮುಂದಾಗುವುದೇ ಇಲ್ಲ. ಮೊದಲು ನಮ್ಮನ್ನು ನಾವು ಅರಿಯುವುದು ಮುಖ್ಯ. ನಮಗೇನು ಬೇಕು? ಯಾವುದನ್ನ ಮನಸ್ಸು, ಬುದ್ಧಿ ಅಪೇಕ್ಷಿಸುತ್ತಿದೆ? ಯಾವುದು ಬದುಕಿಗೆ ಅತ್ಯಗತ್ಯ? ಎನ್ನುವುದನ್ನು ಅರಿಯಬೇಕು. ಅದನ್ನು ಅರಿಯದ ಹೊರತು ನೀವು ಸಾಗುವ ದಾರಿಯಲ್ಲಿ ವೇಗ ಕಾಣದು.
4. ನಿಮ್ಮ ಬಗ್ಗೆ ನೀವೇ ಕಠಿಣರಾಗದಿರಿ:
ನನ್ನ ಸಾಮಥ್ರ್ಯ ಇಷ್ಟೇ. ನನ್ನಿಂದೇನೂ ಆಗದು ಎನ್ನುವ ನಿರ್ಧಾರಗಳೂ ನಮ್ಮನ್ನು ಮತ್ತಷ್ಟು ಕುಗ್ಗಿಸಿಬಿಡುತ್ತವೆ. ನಿಮ್ಮನ್ನು ನೀವು ಕೇವಲವಾಗಿ ನೋಡುವುದನ್ನು ನಿಲ್ಲಿಸಿ. ಎಸ್, ಇದು ನನ್ನಿಂದ ಸಾಧ್ಯ ಎಂಬ ಉತ್ಸಾಹದ ಗುಳಿಗೆಯನ್ನು ಮನಸ್ಸಿಗೆ ಆಗಾಗ ನೀಡುತ್ತೀರಿ. ನಿಮ್ಮ ಮೇಲಿರುವ ನೆಗೆಟಿವಿಟಿ ದೂರವಾದರೆ ಬದುಕಿನ ಸ್ವಾದವನ್ನು ಅರ್ಧ ದಕ್ಕಿಸಿಕೊಂಡಂತೆ.
5. ಖುಷಿ ಘಟನೆಗಳ ಖಜಾನೆ ಆದಷ್ಟು ತುಂಬಿಸಿ:
ಬದುಕು ಸಿಹಿ-ಕಹಿ ಅನುಭವಗಳ ಮೂಟೆ. ಆದರೆ ಯಾವುದನ್ನ ಕೂಡಿಟ್ಟರೆ ಬದುಕಿನ ಗತಿಯನ್ನು ವೇಗ ಮಾಡಬಹುದು ಎಂಬುದು ನಮಗೇ ಬಿಟ್ಟದ್ದು. ಬದುಕಲ್ಲಿ ಕಹಿ ಇದ್ದಷ್ಟೇ ಸಿಹಿ ಘಟನೆಗಳೂ ಇರುತ್ತವೆ, ಅವು ನಮ್ಮನ್ನು ಖುಷಿಯಾಗಿರಿಸುತ್ತವೆ. ಆದಷ್ಟು ಅಂಥವುಗಳನ್ನೇ ನೆನಪಿನ ಖಜಾನೆಯಲ್ಲಿ ತುಂಬಿಸಿಡಿ. ಅವು ನಿಜಕ್ಕೂ ಬದುಕಿನ ವೇಗ ಹೆಚ್ಚಿಸುವುದು ಮಾತ್ರವಲ್ಲ, ಸರಿಯಾದ ಲಯದಲ್ಲಿಯೂ ಮುನ್ನಡೆಸುತ್ತವೆ.
6. ಪೆÇೀಷಕರೊಂದಿಗೆ ಆದಷ್ಟು ಮಾತನಾಡಿ
ತಂದೆ ತಾಯಿ ಮಕ್ಕಳಿಗೆ ಕೆಟ್ಟದ್ದಾಗಲಿ ಅಂಥ ಯಾವತ್ತೂ ಬಯಸುವುದಿಲ್ಲ. ಆದರೆ, ಅವರ ತ್ಯಾಗಗಳೇ ಕೆಲವೊಮ್ಮೆ ಮಕ್ಕಳಿಗೆÀ ಮುಳುವಾಗಿದ್ದುಂಟು. ಅವರಿಗೆ ಹೆಚ್ಚಿನ ಸಮಯ ನೀಡದೆ ತಪ್ಪು ಮಾಡಿರಬಹುದು. ಆದರೆ, ಬೆಳೆದು ಸ್ವಂತ ಯೋಚನೆ ಮಾಡುವ ವಯಸ್ಸಿನಲ್ಲಿರುವ ನಾವು ಅವರೊಟ್ಟಿಗೆ ನಮ್ಮ ಸುಖ-ದುಃಖ, ಅವರು ನಮಗಾಗಿ ಕಷ್ಟಪಟ್ಟ ಘಟನೆಗಳ ಬಗ್ಗೆ ಕೇಳಿದರೆ ಅವರ ಬಗ್ಗೆ ತಿಳಿಯುವುದರ ಜತೆಗೆ, ಅವರೊಂದಿಗಿನ ಸಂಬಂಧ ಗಟ್ಟಿಯಾಗುತ್ತೆ. ಜಗತ್ತು ತಿರಸ್ಕರಿಸಿದರೂ, ದೂಷಿಸಿದರೂ, ಹೆತ್ತವರಿಗೆ ಹೆಗ್ಗಣವೂ ಮುದ್ದು. ಅವರೊಂದಿಗೆ ನಿಮ್ಮೆಲ್ಲ ಮಾತುಗಳನ್ನು ಹೇಳಿಕೊಳ್ಳಿ.
7. ಮುಂದಿನ ಭವಿಷ್ಯ ನಿಮ್ಮ ಕೈಯಲ್ಲಿದೆ :
ಹಿಂದಿನದರ ಚಿಂತೆಯಲ್ಲಿ ಕೈಯಲ್ಲಿರುವ ಇಂದು, ಇಂದಿನ ಅದ್ಭುತ ಕ್ಷಣಗಳನ್ನು ಆಸ್ವಾದಿಸದೇ ಹೋದರೆ, ಇದು ಕೂಡ ಇತಿಹಾಸ ಸೇರದು. ಇಂದಿನ ಕ್ಷಣಗಳನ್ನು ಅದ್ಭುತವಾಗಿರಿಸಿಕೊಳ್ಳದೇ ಹೋದರೆ, ಮುಂದಿನ ಅತ್ಯದ್ಭುತ ಕ್ಷಣಗಳನ್ನು ಖಂಡಿತಾ ಮಿಸ್ ಮಾಡಿಕೊಂಡಂತೆ. ಬದುಕಲ್ಲಿ ಬರುವ ಎಲ್ಲ ಅನುಭವಗಳು ಒಂದಲ್ಲ ಒಂದು ಪಾಠ ನೀಡಲೇ ಬರುವಂಥವು. ಬಂದದ್ದನ್ನ ಪಾಸಿಟಿವ್ ಆಗಿ ಸ್ವೀಕರಿಸಿ. ಜಸ್ಟ್ ಚಿಲ್. ನಿನ್ನೆಯದರ ಚಿಂತೆ ಬೇಡ, ಈ ದಿನ ನಮ್ಮದು.... ಅಷ್ಟೆ.
ಯಾರಿಗಾದರೂ ಬದುಕಿನಲ್ಲಿ ಆಕಸ್ಮಿಕವಾಗಿ ಘಟಿಸಿಬಿಡುವ ಕಹಿ ಅನುಭವದಿಂದ ಹೊರಬರುವುದು ಕಷ್ಟವೇ. ಅದರಲ್ಲೂ ಭಗ್ನಪ್ರೇಮ, ನಿರಂತರವಾದ ಏಕಾಂಗಿತನ, ನಿರಾಶೆಯು ಓರ್ವ ವ್ಯಕ್ತಿಯ ಬದುಕನ್ನು ಹೇಗೆಲ್ಲ ಹಾಳುಮಾಡಬಲ್ಲದು. ಅದರಿಂದ ಹೊರ ಬರುವುದು ಹೇಗೆ ಅನ್ನೋ ತೊಳಲಾಟ ಸರ್ವೇಸಾಮಾನ್ಯ. ಆದರೆ, ಎಲ್ಲದಕ್ಕೂ ಪರಿಹಾರ ಒಂದಿದೆ ಎಂಬ ಸಾರ್ವಕಾಲಿಕ ಸತ್ಯವನ್ನೂ ಅರಿತರೆ ಬದುಕಿನೊಟ್ಟಿಗೆ ಪ್ರೀತಿಯಾಗುವುದು ಖಂಡಿತ.
No comments:
Post a Comment